ಬೆಂ.ಗ್ರಾ.ಜಿಲ್ಲೆ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2021-22ನೇ ಸಾಲಿಗೆ “ಅಮೃತಧಾರೆ ಯೋಜನೆಯಡಿ” ಜಾನುವಾರು ಕ್ಷೇತ್ರಗಳಲ್ಲಿ ಹುಟ್ಟಿರುವ ಹಳ್ಳಿಕಾರ್ ಗಂಡು ಕರುಗಳನ್ನು ಮತ್ತು ಬೀಜದ ಹೋರಿಗಳನ್ನು ಇಲಾಖೆ ನಿಗದಿಪಡಿಸಿರುವ ಮಾರಾಟ ಬೆಲೆಯಂತೆ ಕೊಂಡುಕೊಳ್ಳಲು ಆಸಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹಳ್ಳಿಕಾರ್ ಗಂಡು ಕರುಗಳನ್ನು ಅಥವಾ ಬೀಜದ ಹೋರಿಗಳು 6 ತಿಂಗಳಿಂದ 1 1/2 ವರ್ಷ, 1 1/2 ವರ್ಷದಿಂದ 2 ವರ್ಷ, 2 ರಿಂದ 2 1/2 ವರ್ಷ ಹಾಗೂ 2 ವರ್ಷದ ಮೇಲ್ಪಟ್ಟ ವರ್ಗಗಳಲ್ಲಿ ಒಟ್ಟು 27 ಕರುಗಳು ಲಭ್ಯವಿದ್ದು, ಆಸಕ್ತ ರೈತರು ಷರತ್ತು ಹಾಗೂ ನಿಬಂಧನೆಗೊಳಪಟ್ಟು, ಹತ್ತಿರದ ಪಶು ಆಸ್ಪತ್ರೆಯನ್ನು ಸಂಪರ್ಕಿಸಿ, ಅರ್ಜಿ ನಮೂನೆಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು 2021ರ ಅಕ್ಟೋಬರ್ 10 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕುವಾರು ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಪಶುಆಸ್ಪತ್ರೆ , ದೇವನಹಳ್ಳಿ ತಾಲ್ಲೂಕು ಮೊ.ಸಂ.: 9480910509, ದೊಡ್ಡಬಳ್ಳಾಪುರ ತಾಲ್ಲೂಕು ಮೊ.ಸಂ.: 9632047920, ಹೊಸಕೋಟೆ ತಾಲ್ಲೂಕು ಮೊ.ಸಂ.: 9448988649, ನೆಲಮಂಗಲ ತಾಲ್ಲೂಕು ಮೊ.ಸಂ.: 9845637387 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕರಾದ(ಆಡಳಿತ) ಡಾ.ಜಿ.ಎಂ.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……