ದೊಡ್ಡಬಳ್ಳಾಪುರ: ಇತ್ತಿಚೆಗೆ ಸುರಿದ ಮಳೆಗೆ 21 ವರ್ಷದ ನಂತರ ತುಂಬಿ ಹರಿದ ಮೆಳೇಕೋಟೆ ಕೆರೆಗೆ ಮಾಜಿ ಜಿಲ್ಲಾಧಿಕಾರಿ ಕರೀಗೌಡ ದಂಪತಿ ಪೂಜೆ ಸಲ್ಲಿಸಿದರು.
ಕರೀಗೌಡ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ತಾಲೂಕಿನ ಹಲವು ಕೆರೆಗಳಿಗೆ ಹೂಳೆತ್ತುವ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರ, ಕಾರ್ಖಾನೆಗಳ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿದ್ದರು.
ಅದೇ ರೀತಿ ಮೆಳೇಕೋಟೆಯ ಯುವ ಸ್ಪೂರ್ತಿ ಟ್ರಸ್ಟ್ ಸಹಕಾರದೊಂದಿಗೆ ಗ್ರಾಮದಲ್ಲಿ ಹಣ ಸಂಗ್ರಹಿಸಿ ಮೆಳೇಕೋಟೆ ಕೆರೆಯ ಹೂಳೆತ್ತಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕರೀಗೌಡ ದಂಪತಿಗಳ ಕರೆಸಿ ತುಂಬಿದ ಕೆರೆಗೆ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಮುನಿರಾಜು ಸದಸ್ಯ ಮಂಜುನಾಥ್, ನಂಜೇಗೌಡ, ಯುವ ಸ್ಪೂರ್ತಿ ಟ್ರಸ್ಟ್ ಶಂಕರ್, ವಿಜಯಕುಮಾರ್, ವಿಎಸ್ ಎಸ್ ಎನ್ ನಿರ್ದೇಶಕ ಕೃಷ್ಣಮೂರ್ತಿ (ಕಿಟ್ಟಿ) ಮುಖಂಡರಾದ ಮೋಕ್ಷರಾಮಯ್ಯ, ಅಂಗಡಿ ರಾಜಣ್ಣ, ಬೀಡಿಕೆರೆ ಗೌರೀಶ್,ರಾಜಶೇಖರ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…