ಬೆಂ.ಗ್ರಾ.ಜಿಲ್ಲೆ: ನೆಲಮಂಗಲ ತಾಲೂಕಿನ ಬರಗೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿಗೆ ಅ.23ರಂದು ವಿಶೇಷ ಹೂವಿನಂಗಿ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮವನ್ನು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಹನುಮದ್ ವಿಲಾಸ ಹರಿಕಥೆಯನ್ನು ಆಯೋಜಿಸಲಾಗಿದ್ದು, ದೇವರ ದರ್ಶನ, ವಿಶೇಷ ಪೂಜಾ ಕೈಂಕರ್ಯ, ಮಾರುತಿ ಕಲ್ಯಾಣ ಮಂಟಪದಲ್ಲಿ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ.
ಇತಿಹಾಸ: ವಿಜಯನಗರ ಸಾಮ್ರಾಜ್ಯದ ಆಸ್ಥಾನ ಗುರುಗಳಾಗಿದ್ದ ವ್ಯಾಸರಾಯರು ದೇಶದ ವಿವಿಧೆಡೆಗಳಲ್ಲಿ ಆಂಜನೇಯ ಸ್ವಾಮಿಯ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದಾರೆ. ಅದರಲ್ಲಿ ಒಂದು ಬರಗೂರು ಆಂಜನೇಯ ಮೂರ್ತಿಯಾಗಿದೆ ಎಂಬುದು ಈ ದೇವಾಲಯದ ಕೀರ್ತಿಯಾಗಿದೆ.
ಹೂವಿನಂಗಿ ಪೂಜೆ: ಶರದ್ ಋತುವಿನ ಆಶ್ವೀಜ ಮಾಸದಲ್ಲಿ ಹೂವಿನ ಬೆಳೆ ಹೆಚ್ಚಾಗಿ ಬರುವ ಹಿನ್ನೆಲೆಯಲ್ಲಿ, ರೈತರು ಬೆಳೆದ ಹೂವನ್ನು ಅಲಂಕಾರಿಕವಾಗಿ ಸಿಂಗರಿಸಿ ದೇವರಿಗೆ ಪೂಜೆ ಸಲ್ಲಿಸುವುದನ್ನು ಹೂವಿನಂಗಿ ಪೂಜೆ ಎನ್ನಲಾಗುತ್ತದೆ. ಇದನ್ನು ಇತರೆಡೆ ಹೂವಿನ ಅಲಂಕಾರ ಎಂದು ಕರೆಯಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 23ರಂದು ಗ್ರಾಮಸ್ಥರು, ಭಕ್ತಾದಿಗಳು ಹೂವಿನಂಗಿ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ………