ಬೆಂ.ಗ್ರಾ.ಜಿಲ್ಲೆ: ವಿಜಯಪುರ ನಗರದ ನಾಗರಭಾವಿ ರಸ್ತೆಯಲ್ಲಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಅಪರಿಚಿತ ಕಿಡಿಗೇಡಿಗಳು ಮಲಿನಗೊಳಿಸಿದ್ದಾರೆ
ಈ ಕುರಿತಂತೆ ಹಿಂದು ಜಾಗರಣ ವೇದಿಕೆ ದೇವನಹಳ್ಳಿ ತಾಲೂಕು ಘಟಕದ ಕಾರ್ಯಕರ್ತರು ದೇವಾಲಯದ ಆವರಣದಲ್ಲಿ ಪ್ರತಿಭಟನೆ ಮಾಡಿದರು.
ಈ ವೇಳೆ ಮಾತಾನಾಡಿದ ಹಿಂಜಾವೇ ಪ್ರಾಂತ ಕಾರ್ಯದರ್ಶಿ ಮುನೀಂದ್ರ, ಹಿಂದು ದೇವಾಲಯಕ್ಕೆ ನುಗ್ಗಿ ದೇವಾಲಯದ ಪಾವಿತ್ರತೆಗೆ ದಕ್ಕೆಯುಂಟಾಗುವಂತೆ ಮಾಡಿರುವ ಕಿಡಿಗೇಡಿಗಳನ್ನು ಪೊಲೀಸರು ಶೀಘ್ರವೇ ಬಂಧಿಸಬೇಕಿದೆ.ಕಿಡಿಗೇಡಿಗಳ ಈ ಕೃತ್ಯ ಧರ್ಮ ಧರ್ಮಗಳ ನಡುವೆ ಜಗಳ ಉಂಟುಮಾಡಿ ಕೋಮು ಸೌಹಾರ್ದತೆ ಕದಡುವ ಉದ್ದೇಶ ಹೊಂದಿದ್ದಾರೆ.
ದೇವಾಲಯದ ಪಾವಿತ್ರತೆಗೆ ಉದ್ದೇಶ ಪೂರ್ವಕವಾಗಿ ದಕ್ಕೆ ಮಾಡಿರುವವರನ್ನು 48 ಗಂಟೆಯೊಳಗೆ ಬಂಧಿಸಬೇಕಿದೆ. ಇಲ್ಲವಾದಲ್ಲಿ ಹಿಂಜಾವೇ ಹಾಗೂ ಹಿಂದುಪರ ಸಂಘಟನೆಗಳು ಉಗ್ರ ಹರಾಟ ನಡೆಸುವುದಾಗಿ ತಿಳಿಸಿದರು.
ವಿಷಯ ತಿಳಿದ ಡಿವೈಎಸ್ಪಿ ನಾಗರಾಜು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.
ಪ್ರತಿಭಟನೆಯಲ್ಲಿ ದೇವನಹಳ್ಳಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅರುಣ್, ವಿಜಯಪುರ ನಗರ ಪ್ರಧಾನ ಕಾರ್ಯದರ್ಶಿ ಉಮೇಶ್, ವಿಜಯ ಮಾರುತಿ ಗೆಳೆಯರ ಬಳಗದ ಪದಾಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……