ದೊಡ್ಡಬಳ್ಳಾಪುರ: ಕೆಲ ದಿನಗಳಿಂದಷ್ಟೇ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಿಂದ ಬಿಬಿಎಂಪಿ ಬಿಎಂಟಿಎಫ್ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಸಬ್ ಇನ್ಸ್ಪೆಕ್ಟರ್ ವಿ.ಗಜೇಂದ್ರ ಅವರು ತಾಲೂಕಿನ ಜಿ.ಹೊಸಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗುವ ಮೂಲಕ ಮತ್ತೆ ದೊಡ್ಡಬಳ್ಳಾಪುರಕ್ಕೆ ಮರಳಿದ್ದಾರೆ.
ಕಳೆದ ಒಂದು ವರ್ಷದಿಂದ ದೊಡ್ಡಬೆಳವಂಗಲದಲ್ಲಿ ಕಾರ್ಯನಿರ್ವಹಿಸಿದ್ದ ಗಜೇಂದ್ರ ಅವರು, ಬಿಬಿಎಂಪಿ ಬಿಎಂಟಿಎಫ್ ವಿಭಾಗಕ್ಕೆ ನೇಮಕವಾಗಿದ್ದರು.
ವರ್ಗಾವಣೆಯಾದ ಕೆಲ ದಿನಗಳೊಳಗಾಗಿ ಬಡ್ತಿ ಪಡೆಯಲು ಸಬ್ ಇನ್ಸ್‌ಪೆಕ್ಟರ್ ಗಳಿಗೆ ಅದೃಷ್ಟದ ಪೊಲೀಸ್ ಠಾಣೆ ಎನ್ನಲಾಗುತ್ತಿರುವ ತಾಲೂಕಿನ ಜಿ.ಹೊಸಹಳ್ಳಿ ಪೊಲೀಸ್ ಠಾಣೆಗೆ ಗಜೇಂದ್ರ ವರ್ಗಾವಣೆಯಾಗಿದ್ದು ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಇಂದು ಜಿ.ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಗಜೇಂದ್ರ ಅವರು ಅಧಿಕಾರ ಹಸ್ತಾಂತರ ಪಡೆಯಬಹುದೆಂದು ಪೊಲೀಸ್ ಇಲಾಖೆ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….