ಬೆಂಗಳೂರು: ತೀವ್ರ ಆಕ್ಷೇಪ ನಡುವೆಯೂ ಡಿ.31ರಂದು ನಡೆಸಲು ಕರೆ ನೀಡಿದ್ದ ಕರ್ನಾಟಕ ಬಂದ್ ಹಿಂಪಡೆಯಲಾಗಿದೆ.
ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದ ನಿಯೋಗ, ಹಲವು ಸಮಯದ ಮಾತುಕತೆ ನಂತರ ಹೊರ ಬಂದು ಈ ಕುರಿತು ಮಾಧ್ಯಮಗಳಿಗೆ ತಿಳಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮನವಿಗೆ ಸ್ಪಂದಿಸಿ ಹೋರಾಟಗಾರರು ಬಂದ್ ಕೈ ಬಿಟ್ಟಿರುವುದು ಪ್ರಶಂಸನೀಯ. ನಾಡು, ನುಡಿ ರಕ್ಷಣೆಗೆ ಸದಾ ಎಲ್ಲರೂ ಒಟ್ಟಾಗಿ ಸಾಗುವ ಭರವಸೆ ನೀಡಲಾಗಿದೆ. ಅಲ್ಲದೆ ಈ ಮುಂಚೆ ತಿಳಿಸಿದಂತೆ ಎಂಇಎಸ್ ನಿಷೇಧದ ಕುರಿತಂತೆ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….