ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಖಾನಿಮಠದ ಆಸ್ತಿಯನ್ನು ಮಠದಿಂದ ಮಾರಾಟ ಮಾಡಲಾಗಿದೆ ಎನ್ನುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಈ ಹಿಂದಿನ ಮಠದ ಶಾಲೆಯ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾಗಿದ್ದ ರಾಜಶೇಖರ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಮಠದ ಬಸವರಾಜಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ನಗರದ ಬಸವ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲುಕುಂಟೆ ಸಮೀಪ ಮಠಕ್ಕೆ ಸೇರಿದ ಸುಮಾರು 6 ಎಕರೆ ಭೂಮಿ ಇತ್ತು. ಆ ಭೂಮಿಯಲ್ಲಿ ಮಾವಿನ ಗಿಡಗಳನ್ನು ಬೆಳೆದಿದ್ದೆವೆ. ಅದರೆ ಈ ಭೂಮಿಗೆ ತೆರಳಲು ರಸ್ತೆ ಇರಲಿಲ್ಲ. ಈ ಹಿಂದೆ ಆ ಭೂಮಿ ಗ್ರೋ ಮೋರ್ ಫುಡ್ ಗ್ರಾಂಟ್ ಅಡಿ ಮಠಕ್ಕೆ ಭೂಮಿ ಮಂಜೂರು ಆಗಿತ್ತು. ಆದರೆ ಅದು ಅಕೃತವಾಗಿರಲಿಲ್ಲ. ಇದೇ ಸಮಯದಲ್ಲಿ ಬೇರೊಬ್ಬರು ಮಠದ ಭೂಮಿಯನ್ನು ಬಿಟ್ಟುಕೊಟ್ಟರೆ, ಸನಿಹದಲ್ಲೆ ಇರುವ ಅವರ 6 ಎಕರೆ ಭೂಮಿಯನ್ನು ನೀಡುವುದಾಗಿ ಹೇಳಿದ್ದರು. ಆ ಭೂಮಿಗೆ ರಸ್ತೆ ಕೂಡ ಇದ್ದು, ಮಠಕ್ಕೆ ಅಕೃತವಾದ ಭೂಮಿ ಸಿಗುವ ಭರವಸೆ ಮೇಲೆ ಭೂಮಿ ಬದಲಾವಣೆ ಮಾಡಿಕೊಂಡಿದ್ದೇವೆ ಹೊರತು, ಮಠದ ಭೂಮಿಯನ್ನು ಮಾರಿಲ್ಲ. ಹಿಂದಿನ ಷಡಕ್ಷರಿ ಸ್ವಾಮೀಜಿ ಪ್ರಕಾರ ಯಾರೂ ಅದನ್ನು ಮಾರಲು ಸಾಧ್ಯ ಇಲ್ಲ.
ನೋಂದಣಿ ದಾಖಲೆಯಲ್ಲಿ ಬಸವರಾಜು ಬಿನ್ ಶಿವಣ್ಣ ಎಂದು ನಮೂದಾಗಿದ್ದು, ಸ್ವಾಮೀಜಿ ಹೆಸರಿನ ಹಿಂದೆ ತಂದೆ ಹೆಸರೇಕೆ ಎಂಬ ಆರೋಪದ ಹಿನ್ನೆಲೆ ಅದನ್ನೂ ಸಹ ತಿದ್ದುಪಡಿಗೆ ನೀಡಿದ್ದೇವೆ. ಮಠದಿಂದ ನಡೆಯುತ್ತಿದ್ದ ಸರ್ಕಾರ ಅನುದಾನಿತ ಪ್ರೌಡಶಾಲೆ ವಿದ್ಯಾರ್ಥಿಗಳ ನೋಂದಣಿ ಕಡಿಮೆಯಾದ್ದರಿಂದ ಶಾಲಾ ಪರವಾನಿಗೆ ರದ್ದಾಗಿತ್ತು. ಈ ಶಾಲೆ ಮುಚ್ಚಲು ಕೂಡ ಶಾಲೆಗೆ ಮಕ್ಕಳು ನೋಂದಣಿಯಾಗದೆ ತಡೆದದ್ದು ರಾಜಶೇಖರ್ ಅವರೆ ಎಂದು ಆರೋಪ ಮಾಡಿದ ಅವರು ಖಾಲಿ ಇರುವ ಶಾಲಾ ಕಟ್ಟಡವನ್ನು ಮಠದ ವರಮಾನಕ್ಕಾಗಿ ಬೋಗ್ಯಕ್ಕೆ ನೀಡಿದ್ದೇವೆ ಹೊರತು. ಇಲ್ಲಿ ಯಾವುದೇ ದರ್ಬುಳಕೆ ಆಗಿಲ್ಲ.
ನಾನು ಇಲ್ಲಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಹಾಸ್ಟೆಲ್, ಭೋಜನ ಕೊಠಡಿ ಸೇರಿದಂತೆ ಹಲವಾರು ಅಭಿವೃದ್ಧಿಗಳನ್ನು ಮಾಡಿದ್ದೇನೆ. ಮಠದ ಹಿತರಕ್ಷಣೆಗೆ ಬದ್ದವಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಶ್ವನಾಥ್, ಉಮಾಶಂಕರ್, ಪುಟ್ಟಬಸವರಾಜು, ಮುನಿರಾಜು, ಕೊನಘಟ್ಟ ಬಸವರಾಜು, ಕೆ.ಮಹಾಲಿಂಗಯ್ಯ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….