ಚೆನ್ನೈ, (ಜುಲೈ.20): ಹೊಸ ಶಾಲೆಗೆ ಪ್ರವೇಶ ಪಡೆಯಲು ಹಿಂದಿನ ಶಾಲೆಯ ವರ್ಗಾವಣೆ ಪತ್ರ (ಟಿಸಿ)ದ ಅಗತ್ಯವಿಲ್ಲ ಎಂದು ಮಡ್ರಾಸ್ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ. ಶಾಲೆಗಳು ವರ್ಗಾವಣೆ ಪತ್ರವನ್ನು ಬಾಕಿ ಶುಲ್ಕ ವಸೂಲಯ ಸಾಧನವನ್ನಾಗಿ ಮಾಡಿಕೊಳ್ಳುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾ.ಎಸ್ ಎಂ ಸುಬ್ರಮಣಿಯಂ ಹಾಗೂ ಸಿ ಕುಮಾರಪ್ಪನ್ ಅವರ ಪೀಠ ಈ. ಮಹತ್ವದ ಆದೇಶ ನೀಡಿದೆ.
ಮಕ್ಕಳ ವರ್ಗಾವಣೆ ಪತ್ರದ ಮೇಲೆ ಶುಲ್ಕ ಬಾಕಿ ಸಂಬಂಧ ಯಾವುದೇ ವಿಚಾರವನ್ನೂ ನಮೂದಿಸು ವಂತಿಲ್ಲ ಇದು ವಿದ್ಯಾರ್ಥಿಯ ಖಾಸಗಿ ದಾಖಲೆ ಯಾಗಿರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಬಗ್ಗೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಿರುವ ಹೈ ಕೋರ್ಟ್ ಹೊಸ ಶಾಲೆಗೆ ದಾಖಲಾತಿ ಸಮಯದಲ್ಲಿ ಹಿಂದಿನ ಶಾಲೆಯಿಂದ ವರ್ಗಾವಣೆ ಪತ್ರವನ್ನು ನೀಡಬೇಕೆಂದು ಒತ್ತಾಯಿಸುವಂತಿಲ್ಲ ಹಾಗೇ ವರ್ಗಾವಣೆ ಪತ್ರದಲ್ಲಿ ಶುಲ್ಕ ಬಾಕಿ ಸಂಬಂಧ ಯಾವುದೇ ಉಲ್ಲೇಖ ಮಾಡುವಂತಿಲ್ಲ ಎಂಬ ಸುತ್ತೋಲೆ ಹೊರಡಿಸುವಂತೆ ತಿಳಿಸಿದೆ.
ಒಮ್ಮೆ ಈ ನಿಯಮ ಉಲ್ಲಂಘನೆಯಾದಲ್ಲಿ ಸೆಕ್ಷನ್ 17(ಆರ್‌ಟಿಇ) ಕಡ್ಡಾಯ ಶಿಕ್ಷಣ ಹಕ್ಕು ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಶಾಲೆ ಶುಲ್ಕ ಪಾವತಿಸುವು ದು ಪೋಷಕರ ಕರ್ತವ್ಯ ಆದರೆ ಈ ವಿಚಾರದಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವುದು, ಅವಮಾನಿಸುವುದು ಸರಿಯಲ್ಲ.
ಪೋಷಕರಿಂದ ಶುಲ್ಕ ಪಡೆಯುವ ಹಕ್ಕು ಶಿಕ್ಷಣ ಸಂಸ್ಥೆಗಿದೆ ಆದರೆ ಈ ಪ್ರಕ್ರಿಯೆಯಲ್ಲಿ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….