ದಾಬಸ್‌ಪೇಟೆ, (ಜುಲೈ.20); ನೆಲಮಂಗಲ ತಾಲೂಕಿನ ಸೊಳ್ಳೆಗುಟ್ಟೆ ಗ್ರಾಮದಲ್ಲಿ ಕೃಷಿ ಜಮೀನು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಮಗು ಕೆಳಗೆ ಬಿದ್ದು, ಟ್ರ್ಯಾಕ್ಟರ್ ಟಿಲ್ಲರ್‌ನ ಬ್ಲಡ್ ಗೆ ಸಿಲುಕಿ ಮೃತಪಟಿದ್ದಾನೆ.
ಬಾವಿಕೆರೆ ಗ್ರಾಮದ ಸೊಳ್ಳೆಗುಟ್ಟೆಯ ರೈತ ಭರತ್ ಮಗ ನಂದನ್ (4) ಮೃತಪಟ್ಟವನು.
ರೈತ ಭರತ್ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಟ್ರ್ಯಾಕ್ಟರ್ ಕರೆಸಿದ್ದರು. ಆ ಟ್ರ್ಯಾಕ್ಟರ್‌ನಲ್ಲಿ ಭರತ್-ಚೈತ್ರಾ ದಂಪತಿಯ 4 ವರ್ಷದ ಮಗ ನಂದನ್ ಕುಳಿತಿದ್ದಾಗ ಆಯತಪ್ಪಿ ರೋಟರಿ ಟಿಲ್ಲರ್‌ಮೇಲೆ ಬಿದ್ದಿದ್ದಾನೆ. ನಂದನ್ ತಲೆ ರೋಟರಿ ಟಿಲ್ಲರ್‌ನ ಬೇಡ್‌ಗೆ ತಗುಲಿ ತಲೆಯ ಒಂದು ಭಾಗ ಕತ್ತರಿಸಿ, ಸ್ಥಳದಲ್ಲೇ ನಂದನ್ ಮೃತಪಟ್ಟಿದ್ದಾನೆ.
ನೆಲಮಂಗಲ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ ವಶಕ್ಕೆ ಪಡೆದು ಚಾಲಕನ ಮಾಹಿತಿ ಕಲೆ ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಎಎಸ್ಪಿ ನಾಗರಾಜು ಹಾಗೂ ಡಿವೈಎಸ್‌ಪಿ ಜಗದೀಶ್, ಗ್ರಾಮಾಂತರ ಠಾಣೆ ಪಿಎಸ್‌ಐ ರಾಜೀವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….