ನೆಲಮಂಗಲ, (ಜುಲೈ.20); ಆತ ಯೂಟ್ಯೂಬ್ ವಾಹಿನಿಯೊಂದನ್ನ ನಡೆಸಿಕೊಂಡು, ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ ಆತನ ಜೀವನದಲ್ಲಿ ನಡೆದಿರುವ ಯಾವುದೋ ಒಂದು ಘಟನೆ ಆತನ ಬದುಕಿನ ದಿಕ್ಕನ್ನೆ ಬದಲಾಯಿಸಿದೆ. ಅದೇನಾಯ್ತೋ ಏನೋ ಚೆನ್ನಾಗಿದ್ದೋದು, ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರು ಎಳೆದಿದ್ದಾನೆ.
ಊರ ಹೊರಗಿರುವ ಅರಣ್ಯ ಪ್ರದೇಶ, ಅರಣ್ಯದಲ್ಲಿ ತುಂಬೆಲ್ಲಾ ನಿಂತಿರುವ ಜನ, ಇದೇನಾಗಿದೆ ಅಂತಾ ನೋಡುದ್ರೆ ಅಲ್ಲೊರ್ವ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರೇ ಇದೇನಾಗಿದೆ ಎಂದು ಅಲ್ಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ರು, ಪೊಲೀಸರು ಸ್ಥಳಕ್ಕೆ ಬಂದು ನೋಡಿದ್ಮೆಲೆ ಅವರಿಗೆ ಗೊತ್ತಾಗಿದ್ದು ಈತ ಒಂದು ಖಾಸಗಿ ಯೂಟ್ಯೂಬ್ ವಾಹಿನಿಯ ಮಾಲೀಕ ಎಂದು.
ಈ ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಧರ್ಮನಾಯಕನ ತಾಂಡ್ಯದಲ್ಲಿ. ಇಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಖಾಸಗಿ ಯುಟ್ಯೂಬ್ ಚಾನೆಲ್ ಮಾಲೀಕ ಸುಮಾರು 35 ವರ್ಷದ ಮಂಜುನಾಥ್
ಈ ಮಂಜುನಾಥ್ ರಾತ್ರಿ ಸಾವಿಗು ಮುನ್ನಾ ಬೆಂಗಳೂರಿನ ಮಂಜುನಾಥನಗರದಲ್ಲಿರುವ ತನ್ನ ಕಚೇರಿಯಲ್ಲಿ ಫೇಸ್‌ಬುಕ್‌ನಲ್ಲಿ ಒಂದು ಲೈವ್ ಬಂದಿದ್ದಾನೆ. ಲೈವ್‌ನಲ್ಲಿ ಪೊಲೀಸರಿಂದ ತನಗಾದ ಅವಮಾನವನ್ನ ತಿಳಿಸಿದ್ದಾನೆ.
ಪೊಲೀಸರು ಅಮಾನುಷವಾಗಿ ದೌರ್ಜನ್ಯ ಮಾಡಿದ್ದಾನೆ ಎಂದು ಗೋಳಾಡಿದ್ದಾರೆ. ಅಲ್ಲದೆ ತಾನು ಯಾವ ಯಾವ ಕೆಲ್ಸಗಳನ್ನ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಬಳಿಕ ತನ್ನ ಕಚೇರಿಯಲ್ಲೇ ಡೆತ್ ನೋಟ್ ಬರೆದಿಟ್ಟು ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿದ್ದಾರೆ.
ಬಳಿಕ ಸ್ನೇಹಿತರ ಬೈಕ್ ತೆಗೆದುಕೊಂಡು ಬಂದು ಘಣನಾಯಕನ ತಾಂಡ್ಯದಲ್ಲಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಆತ್ಮಹತ್ಯೆಗೆ ನಿಖರ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಗೆ ಮುಂದಾಗಿದ್ದಾರೆ. ತನಿಖೆಯ ಬಳಿಕವಷ್ಟೆ ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….