ದೊಡ್ಡಬಳ್ಳಾಪುರ, (ಸೆ.19); ಖ್ಯಾತ ನಟ, ಕನ್ನಡ ಚಿತ್ರರಂಗದ ‘ಸಾಹಸ ಸಿಂಹ’ ದಿವಂಗತ ವಿಷ್ಣುವರ್ಧನ್ ಅವರ 74ನೇ ಜನ್ಮದಿನವನ್ನು ನಿನ್ನೆ (ಸೆ.18) ಅವರ ಅಭಿಮಾನಿಗಳು ದೊಡ್ಡಬಳ್ಳಾಪುರ ಸೇರಿದಂತೆ ನಾಡಿನಾದ್ಯಂತ ಆಚರಿಸಿದ್ದಾರೆ.
ಅಂತೆಯೇ ಸಾಹಸಸಿಂಹ ಡಾ”ವಿಷ್ಣುವರ್ಧನ್ ಅಭಿಮಾನಿಗಳ ಬಳಗದ ವತಿಯಿಂದ ದಾದಾ ಅವರ ಹುಟ್ಟು ಹಬ್ಬ ಆಚರಣೆ ಅಂಗವಾಗಿ ಗಂಗಾಧರಪುರ ರೋಜಿಪುರದಲಿ ಕೇಕ್ ಕತ್ತರಿಸಿ, ಅನ್ನ ಸಂತರ್ಪಣೆ ಮಾಡಿ ಆಚರಣೆ ಮಾಡಲಾಗಿದೆ.
ಇದನ್ನೂ ಓದಿ; Breaking news; ದೊಡ್ಡಬಳ್ಳಾಪುರ BEO ವಿರುದ್ಧ ಶಿಸ್ತುಕ್ರಮಕ್ಕೆ CEO ಶಿಫಾರಸ್ಸು..!
ಈ ವೇಳೆ ವಿಷ್ಣು ದಾದಾ ಅಭಿಮಾನಿಗಳಾದ ಮಧು ರೋಜಿಪುರ, ನಗರಸಭಾ ಸದಸ್ಯೆ ರಜನಿ ಸುಬ್ರಮಣಿ, ಮಂಜು ಎಸ್ಎಂಎಸ್. ಶಿವು ಬೊಂಬಾಟ್, ನವೀನ್ ಕುಮಾರ್, ವೆಂಕಟೇಶ್, ಸತೀಶ್ ಮತ್ತಿತರರಿದ್ದರು.