ಬೆಂಗಳೂರು: ಸ್ಥಳ ನಿರೀಕ್ಷೆಯಲ್ಲಿದ್ದ ಐವರು DYSP ಹಾಗೂ 20 ಪೊಲೀಸ್ ಇನ್‌ಸ್ಪೆಕ್ಟರ್ಗಳನ್ನು ಶುಕ್ರವಾರ ರಾತ್ರಿ ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶಿಸಿದೆ.
ರಾಜ್ಯದ ವಿವಿಧ ವಿಭಾಗ ಹಾಗೂ ಠಾಣೆಗಳಿಗೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ಐವರು DYSP ಗಳನ್ನು ರಾಜ್ಯ ಗುಪ್ತವಾರ್ತೆ, ಲೋಕಾಯುಕ್ತ, ವಿಧಾನಸೌಧ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಮೀಸಲು ಪಡೆಯ ನಾಲ್ವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನೂ ವರ್ಗಾವಣೆ ಮಾಡಿ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಪರವಾಗಿ ಐಪಿಎಸ್ ಸೌಮೇಂದು ಮುಖರ್ಜಿ ಅವರು ಆದೇಶಿಸಿದ್ದಾರೆ.
