ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra modi) ಅವರ ಮಿತ್ರ ಅಮೆರಿಕ ಅಧ್ಯಕ್ಷ, ಡೊನಾಲ್ಡ್ ಟ್ರಂಪ್ (Donald Trump) ಭಾರತದ ಮೇಲೆ ದುಬಾರಿ ಆಮದು ಸುಂಕ ವಿಧಿಸಿದ್ದಾರೆ. ಅಲ್ಲದೆ ದಂಡವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಭಾರತೀಯ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಟೂತ್ ಸೋಶಿಯಲ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಭಾರತದ ಮೇಲೆ ಸುಂಕ ವಿಧಿಸಲು ಕಾರಣಗಳನ್ನು ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿ ಅಧಿಕಾರಕ್ಕೆ ಬಂದ ನಂತರ ಟ್ರಂಪ್ ಸುಂಕದ ವಿಚಾರದಲ್ಲಿ ನಿರಂತರವಾಗಿ ಕಠಿಣ ನಿರ್ಧಾರ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕೆನಡಾ, ಮೆಕಿಕೋ, ಚೀನಾ, ಯುರೋಪಿಯನ್ ಯೂನಿಯನ್, ರಷ್ಯಾ, ಜಪಾನ್ ಮೇಲೂ ಸುಂಕ ವಿಧಿಸಿದ್ದಾರೆ.
ಆ ದೇಶಗಳ ಮೇಲೆ ಒತ್ತಡ ಹೇರಿ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಭಾರತಕ್ಕೂ ಬಿಸಿ ಮುಟ್ಟಿದೆ.
ಉಭಯ ದೇಶಗಳಿಗೂ ತಟ್ಟಲಿದೆ ಬಿಸಿ: ಅಮೆರಿಕ ಮತ್ತು ಭಾರತದ ವ್ಯಾಪಾರ ಸಂಬಂ ಧಗಳು ಎರಡೂ ದೇಶಗಳಿಗೆ ಮುಖ್ಯವಾಗಿವೆ. ಎರಡೂ ದೇಶಗಳು ಪರಸ್ಪರ ದೊಡ್ಡ ವ್ಯಾಪಾರ ಪಾಲುದಾರರು. ಈ ಸುಂಕದಿಂದ ಉಭಯ ದೇಶಗಳಿಗೂ ಬಿಸಿ ತಟ್ಟಲಿದೆ. ಟ್ರಂಪ್ ಅವರ ಹೇಳಿಕೆಗೆ ಮೋದಿ ಸರಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ಈ ಸುಂಕದಿಂದ ಎರಡೂ ದೇಶಗಳ ವ್ಯಾಪಾರ ಸಂಬಂಧಕ್ಕೆ ತೊಂದರೆಯಾ ಗಬಹುದು ಎಂದು ತಜ್ಞರು ಹೇಳಿದ್ದಾರೆ.
ಟ್ರಂಪ್ ಪೋಸ್ಟ್:
ಭಾರತ ನಮ್ಮ ಸ್ನೇಹಿತನಾಗಿದ್ದರೂ ಅವರೊಂದಿಗೆ ನಾವು ವ್ಯವಹಾರ ಮಾಡಿರುವುದು ಕಡಿಮೆಯೇ. ಅಮೆರಿಕದ ಸರಕುಗಳ ಮೇಲೆ ಅವರು(ಭಾರತ) ಅಧಿಕ ಸುಂಕ ವಿಧಿಸಿರುವುದೇ ಅದಕ್ಕೆ ಕಾರಣವಾಗಿದೆ.

ಎಲ್ಲ ದೇಶಗಳಿಗೆ ಹೋಲಿಸಿದರೆ ಅವರನ್ನು ಅಧಿಕ ಸುಂಕವಾಗಿದೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಹತ್ಯೆಯನ್ನು ರಷ್ಯಾವು ನಿಲ್ಲಿಸಬೇಕು ಎಂದು ಜಗತ್ತು ಆಗ್ರಹಿಸುತ್ತಿ ರುವಾಗ ಭಾರತವು ರಷ್ಯಾದಿಂದ ಇಂಧನ ಖರೀದಿಸುತ್ತಿದೆ. ಇದು ಒಳ್ಳೆಯದಲ್ಲ. ಆದ್ದರಿಂದ ಆಗಸ್ಟ್ 1ರಿಂದ ಜಾರಿಯಾಗುವಂತೆ ಭಾರತಕ್ಕೆ ಶೇ.25ರಷ್ಟು ಸುಂಕ ವಿಧಿಸಲಾಗಿದೆ. ಅಲ್ಲದೇ ತನ್ನ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸಿದಕ್ಕಾಗಿ ಭಾರತ ದಂಡವನ್ನೂ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.