ಬೆಂಗಳೂರು: ಖ್ಯಾತ ನಟ ದರ್ಶನ್ (Darshan) ಹಾಗೂ ಅವರ ಅಭಿಮಾನಿಗಳ ವಿರುದ್ಧ ಬೇಕಾಬಿಟ್ಟಿ ಮಾತನಾಡುತ್ತಿರುವ ಬಿಗ್ ಬಾಸ್ ವಿನ್ನರ್ ಪ್ರಥಮ್‌ಗೆ (Pratham) ಹಿರಿಯ ನಿರ್ಮಾಪಕ ಕೆ ಮಂಜು (K Manju) ಆಕ್ರೋಶ ಹೊರಹಾಕಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ದರ್ಶನ್ ಬಗ್ಗೆ ಪ್ರಥಮ್ ಮಾತನಾಡಿರುವುದು ಓಒರ್ ಆಗಿದೆ. ಜೈಲಿಗೆ ಹೋದವರೆಲ್ಲ ಕೆಟ್ಟವರಲ್ಲ, ಅನಿವಾರ್ಯ ಕಾರಣಗಳಿಂದ ಓಗಿರ್ತಾರೆ. ದರ್ಶನ್ ಒಬ್ಬ ಸೆಲೆಬ್ರಿಟಿ ಅವರನ್ನ ಮಾತನಾಡಿಸಿದವರೆಲ್ಲ ಕೆಟ್ಟವರ..? ನಿನಗೇನುಕ್ ಬೇಕು..? ನೀನ್ ಯಾರು..? ನೀನೆನ್ ಪೊಲೀಸ..? ಕಾನೂನಾ.? ಎಂದು ಪ್ರಥಮ್ ಅವರನ್ನು ಪ್ರಶ್ನಿಸಿದ್ದಾರೆ.
ಅಲ್ಲೆಲ್ಲೋ ಹೋಗಿದ್ದೀಯಾ ಫಂಗ್ಷನ್ಗೆ ಅಲ್ಲೊಂದು ಕಿರಿಕ್, ನಿನು ಬೇಕು ಅಂತ ಮಾಡ್ತಾ ಇದ್ದೀಯಾ. ಇದರಿಂದ ಯಾರೋ ಅಭಿಮಾನಿಗೆ ಕೋಪ ಬರುತ್ತೆ. ನಾವು ಹೋಗುವಾಗ ತುಂಬಾ ಜನ ಚೆನ್ನಾಗಿ ಮಾತಾಡಿಸುವವರು ಇರ್ತಾರೆ, ಬೈದುಕೊಳ್ಳುವವರು ಇರ್ತಾರೆ.
ದರ್ಶನ್ ಅಭಿಮಾನಿಗಳಿಗೆ ಹೇಳಬೇಕು ಅಂತಾನೆ. ದರ್ಶನ್ ಹೇಳುದ್ರೆ ಅಭಿಮಾನಿಗಳು ಕೇಳಿಬಿಡ್ತಾರಾ..? ದರ್ಶನ್ ಅಭಿಮಾನಿಗಳಿಗೆ ಬೈಯ್ಯಿ ಅಂತ ಹೇಳಿದ್ರಾ..? ಪ್ರಥಮ್ ಮಾತುಗಳು ನಾ ಇಷ್ಟ ಪಡಲ್ಲ. ಪ್ರಥಮ್ ದರ್ಶನ್ ಬಗ್ಗೆ ಮಾತನಾಡಿದ್ದು ತಪ್ಪು. ಯಾಕ್ ಕೇಳ್ತಿಯಾ..? ದರ್ಶನ್ ಹೇಳಿದ್ ನೀ ನೋಡಿದ್ದೀಯಾ..? ಸಾವಿರ ಜನ ಸಾವಿರ ಮಾತಾಡುತ್ತಾರೆ.
ಇದನ್ನು ಓದಿ: ದೊಡ್ಡಬಳ್ಳಾಪುರಕ್ಕೆ ಪ್ರಥಮ್.. ಪೊಲೀಸರಿಂದ ಸ್ಥಳ ಮಹಜರ್
ಫಥಮ್ ಫಸ್ಟ್ ನೀ ಸರಿಯಾಗಿರು, ನೀ ಯಾಕ್ ಪದೇ ಪದೇ ಹೋಗಿ ಈ ರೀತಿ ಆಡೋದು. ಪೊಲೀಸರಿಗೆ ದೂರು ಕೊಟ್ಟಿದ್ದೀಯಾ ಅವರು ತನಿಖೆ ಮಾಡ್ತಾರೆ. ನೀನ್ ಯಾಕ್ ಅವರ ಸುದ್ದಿ ಹೇಳ್ತೀಯ. ಪ್ರಥಮ್ ಮಾಡಿರುವುದು ತಪ್ಪು ಅಂತ ನಾ ಹೇಳ್ತಿನಿ. ವಯಕ್ತಿಕವಾಗಿ ದರ್ಶನ್ ನಿನಗೆ ದುಷ್ಮನ್ ಏನಲ್ಲ. ನೀನ್ ಯಾಕ್ ದರ್ಶನ್ ಬಗ್ಗೆ ಮಾತಾಡುತ್ತೀಯಾ..? ಬಿಟ್ ಬಿಡು.
ಯಾರಾದ್ರೂ ಬಂದ್ ಮಾತಾಡುದ್ರೆ, ಇಲ್ಲಪ್ಪ ನಾವು ಅವರು ಚೆನ್ನಾಗಿದ್ದೀವಿ ಅಂತ ಹೇಳು. ಯಾರೂ ಬಂದು ಸುಮ್ ಸುಮ್ನೆ ಚುಚ್ ಬಿಡಲ್ಲ, ಯಾಕ್ ಚುಚ್ ಬಿಡ್ತಾರೆ..? ಮತ್ ನಮ್ ಬಗ್ಗೆ ಯಾಕ್ ಯಾರು ಮಾತಾಡಲ್ಲ. ಬೇರೆಯವರ ಬಗ್ಗೆ ಯಾಕ್ ಮಾತಾಡಲ್ಲ. ಯಾಥಾ ರಾಜ ತಥಾ ಪ್ರಜಾ, ನಾವ್ ಹೇಗ್ ಇರ್ತೀವಿ ಜನ ಹಾಗೆ ಇರ್ತಾರೆ. ಅದ್ ಬಿಟ್ ನೀನು ಹಾಗ್ ಮಾಡಿ ಬಿಡ್ತೀನಿ, ಹೀಗ್ ಮಾಡಿ ಬಿಡ್ತೀನಿ ಅಂದ್ರೆ, ಅಭಿಮಾನಿಗಳು ಇದ್ದೇ ಇರ್ತಾರೆ.
ಪಾಪ ದರ್ಶನ್ ಯಾರಿಗೂ ಏನೂ ಹೇಳುವಂತ ವ್ಯಕ್ತಿಯಲ್ಲ. ಕಲಾವಿದರ ಬಗ್ಗೆ, ಚಿತ್ರರಂಗದ ಬಗ್ಗೆ ಆತನಿಗೆ ತುಂಬಾ ಗೌರವವಿದೆ. ಸಿನಿಮಾ ಮಂಡಳಿಗೂ ಗೊತ್ತಿದೆ. ಎಲ್ಲಾ ಕಲಾವಿದರಿಗೂ ದರ್ಶನ್ ಬಗ್ಗೆ ಗೌರವ ಇದೆ.
ನಾವೂ ನಾವೂ ಕಿತ್ತಾಡುವುದು ಬೇಡ. ಯಾರೋ ಮಾಡಿರ್ತಾರೆ. ಆತನ ಅಭಿಮಾನಿಗಳು ಅಂತ ನೀ ಹೇಗ್ ಹೇಳ್ತೀಯಾ..? ನಿನ್ನ ಕಡೆಯವರೆ ಮಾಡಿರಬಹುದು. ನೀನ್ ಹೇಳ್ತಿರುತ್ತೀಯಾ..? ಕಣ್ಣಾರೆ ನೋಡದೆ, ಕಿವಿಯಾರೆ ಕೇಳದೇ ಮಾತಾಡಬೇಡ ಎಂದು ಛೀಮಾರಿ ಹಾಕಿದರು.
ಕೇಸ್ ಕೋರ್ಟಲ್ಲಿ ಇರುವಾಗ ರಮ್ಯಾ ಪೋಸ್ಟ್ ತಪ್ಪು: ನಟ ನಟಿಯರ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತದೆ. ಅದು ನಾವು ಯಾವ ರೀತಿ ಒಡನಾಟ ಇಟ್ಟುಕೊಂಡಿರುತ್ತೇವೆ ಅದರ ಮೇಲೆ ನಿರ್ಣಯ ಆಗುತ್ತೆ.
ಇನ್ನೂ ಸಮಾಜಿಕ ಜಾಲತಾಣ ಬಂದ ಬಳಿಕ ಯಾರ್ ಯಾರೋ ಅಭಿಮಾನಿಗಳ ಹೆಸರಲ್ಲಿ ಒರಿಜಿನಲ್ ಅಭಿಮಾನಿಗಳು ಇರ್ತಾರೆ, ನಕಲಿ ಅಭಿಮಾನಿಗಳು ಇರ್ತಾರೆ, ಕೆಲವರು ಜಗಳ ತಂದಿಡಬೇಕೆಂದು ಅಂತಲೇ ಇರ್ತಾರೆ. ಅದನ್ನು ತುಂಬ ಜನ ಇರ್ತಾರೆ. ಚಿತ್ರರಂಗದವರು ಅದನ್ನು ತಲೆಗೆ ಇಟ್ಟುಕೊಳ್ಳಬೇಡಿ. ಅದಕ್ಕೆ ಅಂತಲೇ ಕೆಲವು ಜನ ಹುಟ್ಟಿಕೊಂಡು ಬಿಟ್ಟಿದ್ದಾರೆ.
ಸಿನಿಮಾ ಅನ್ನೋದು ದೇವಸ್ಥಾನ ಇದ್ದಂತೆ. ನಮ್ಮ ಉದ್ದೇಶ ಉತ್ತಮ ಸಿನಿಮಾ ನೀಡುವುದಾಗಬೇಕು ಅಷ್ಟೆ. ತಂದಿಟ್ಟು ಮಜಾ ತಗೋಳಕ್ಕೆ ಅಂತನೇ ಕೆಲವರು ಇದ್ದಾರೆ ಅದುನ್ನ ನೀವ್ ಯಾಕ್ ಸೀರಿಯಸ್ ತಗೋತೀರಿ ಅಂತ ಸಂಸದೆ ರಮ್ಯಾ ಅವರಿಗೆ ತಿರುಗೇಟು ನೀಡಿದರು.
ದರ್ಶನ್ ನೊಂದಿದ್ದಾರೆ. ನೊಂದಿರುವವರಿಗೆ ನಾವು ಕಲ್ಲು ಹಾಕಬಾರದು. ಈಗ ಅವರು ಮಾಡಿದ್ದಾರೋ ಬಿಟ್ಟಿದ್ದಾರೋ ನಮ್ಮ ಕೈಯಲ್ಲಿ ಇಲ್ಲ ಕಾನೂನಿನ ಅನ್ವಯ ನ್ಯಾಯಾಲಯ ತೀರ್ಪು ನೀಡುತ್ತೆ. ನಾವೆಲ್ಲ ಯಾರು ಹೇಳೋಕೆ.
‘ದರ್ಶನ್ ಪ್ರಕರಣ ಕೋರ್ಟ್ ನಲ್ಲಿದ್ದಾಗ ರಮ್ಯಾ ಆ ರೀತಿ ಪೋಸ್ಟ್ ಮಾಡಿದ್ದು ತಪ್ಪು’. ಅಲ್ಲದೆ ಈ ಘಟನೆ ನಡೆದಾಗ ಎಲ್ಲರೂ ಖಂಡಿಸಿ ಮಾತನಾಡಿದ್ದೇವೆ. ಈಗ ಕೋರ್ಟ್‌ನಲ್ಲಿದ್ದಾಗ ರಮ್ಯಾ ಯಾಕೆ ಪೋಸ್ಟ್ ಮಾಡಬೇಕಿತ್ತು ? ನ್ಯಾಯಾಲಯದಲ್ಲಿರುವ ಕೇಸಿನ ಬಗ್ಗೆ ಮಾತನಾಡಬಾರದಿತ್ತು.
ಅವಿವೇಕಿಗಳು ಕೆಲವರು ತಂದಿಡುವವರು ಇರ್ತಾರೆ, ಅದಕ್ಕೆ ಯಾರು ಕಿವಿಗೊಡಬೇಡಿ. ನಿಮ್ ತೊಂದರೆ ಆದರೆ ಪೊಲೀಸರಿಗೆ ದೂರುಕೊಡಿ, ಕಾನೂನಿನ ಪ್ರಕಾರ ತೀರ್ಪು ಕೊಡ್ತಾರೆ ಎಂದು ಕೆ. ಮಂಜು ಹೇಳಿದ್ದಾರೆ.