ದೊಡ್ಡಬಳ್ಳಾಪುರ: ಫ್ರಿಡ್ಜ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ (Short circuit) ಬೇಕರಿಗೆ ಬೆಂಕಿ ಹೊತ್ತಿ ಹೊತ್ತಿಕೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿ ಸಮೀಪದ ಬ್ಯಾಂಕ್ ಸರ್ಕಲ್ ಬಳಿ ಸಂಭವಿಸಿದೆ.
ಬ್ಯಾಂಕ್ ಸರ್ಕಲ್ ಬಳಿಯ SLV ಬೇಕರಿಯಲ್ಲಿ ದಿನ ನಿತ್ಯದಂತೆ ವಹಿವಾಟು ನಡೆಸುವ ವೇಳೆ, ತಂಪುಪಾನಿಯ ಶೇಖರಿಸಿ ಇಡಲಾಗಿದ್ದ ಖಾಸಗಿ ಕಂಪನಿಯೊಂದರ ಫ್ರಿಡ್ಜ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ತಗುಲಿದೆ.
ಕೂಡಲೇ ಕಾರ್ಮಿಕರು ಹೆಚ್ಚೆತ್ತು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದಾರಾದರೂ ಬೆಂಕಿ ತಹಬದಿಗೆ ಬಂದಿಲ್ಲ.
ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾಗಿದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ಬೇಕರಿ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.