Darshan's open letter to fans

ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ, ಯಾರಿಗೂ ಮೆಸೇಜ್ ಮಾಡಬೇಡಿ; ಅಭಿಮಾನಿಗಳಿಗೆ ದರ್ಶನ್ ಫ್ಯಾನ್ ಪೇಜ್ಗಳಲ್ಲಿ ಸಂದೇಶ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ಎಲ್ಲೆಡೆ ಪ್ರಚಲಿತ ಹೆಸರು, ಆತನ ಹೆಸರು ಸ್ಮರಣೆ ಇಲ್ಲದೆ ಖಾಸಗಿ ಚಾನಲ್‌ಗಳ ದಿನದ ವರದಿ ಮುಗಿಯುವುದಿಲ್ಲ.

ಗೆಳತಿಗೆ ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ಜಾಮೀನಿನ ಮೇಲೆ ಇರುವ ನಟ ದರ್ಶನ್ ವಿರುದ್ಧ ದೊಡ್ಡಮಟ್ಟದ ಷಡ್ಯಂತ್ರ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.

ಕೆಲ ಖಾಸಗಿ ಚಾನಲ್‌ಗಳ TRPಗೆ ದರ್ಶನ್ ಜಪ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಲಕ್ಷಾಂತರ ಅಭಿಮಾನ ಹೊಂದಿರುವ ನಟ ಆದ ಕಾರಣ ಚಾನಲ್ ಗಳಿಗೆ ಅದು ಸಹಜ ಪ್ರಕ್ರಿಯೆ. ಆದರೆ ಕೆಲ ಜನರಿಗೆ ಪರಿಚಯವಿಲ್ಲದ, ನಟನೆ ಮರೆತು ಜನಮನದಿಂದ ದೂರ ಸರಿದಿರುವ ನಟರಿಗೆ ದರ್ಶನ್ ಪ್ರಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಅಂತೆಯೇ ಅವಹೇಳನಕಾರಿ ಕಾಮೆಂಟ್ ಗಳಿಗೂ ಸಿಲುಕುತ್ತಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿದೆ.

ಈಗ ದರ್ಶನ್ ಸುತ್ತಲೇ ಸುತ್ತುತ್ತಿರುವ ಪ್ರಮುಖ ಎರಡು ವಿಚಾರಕ್ಕೆ ಬರೋಣ‌.

ಮೊದಲನೆಯದ್ದು ಜುಲೈ.22ರಂದು ದೊಡ್ಡಬಳ್ಳಾಪುರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಬಿಗ್‌ಬಾಸ್ ವಿನ್ನರ್ ಪ್ರಥಮ್ ಅವರ ಮೇಲೆ ಹಲ್ಲೆ, ಕೊಲೆ ಯತ್ನ ನಡೆದಿದೆ ಎಂಬುದು.

ಈ ಕುರಿತಂತೆ ಪೊಲೀಸ್ ಠಾಣೆಗೆ ದೂರು ಕೊಡುವುದು ಒಂದನ್ನು ಬಿಟ್ಟು ಪ್ರಥಮ್, ಚಾನಲ್‌ಗಳ ಮೈಕ್ ಮುಂದೆ ಏನ್ ಏನೋ ಹೇಳ್ತಾರೆ, ದರ್ಶನ್ಗೆ ಬುದ್ದಿ ಹೇಳ್ತಾವ್ರೆ, ಸವಾಲು ಹಾಕ್ತಾ ಇದ್ದಾರೆ. ಇದಕ್ಕೆ ಕೆಲ ಖಾಸಗಿ ಚಾನೆಲ್ ವರದಿಗಾರ ಪ್ರಚೋದನೆ ಕಾರಣ ಎಂಬುದು ಅಭಿಮಾನಿಗಳ ಆರೋಪ.

ಇನ್ನೂ ಅದೇ ಸ್ಥಳದಲ್ಲೇ ಇದ್ದ ಬುಲೆಟ್ ಪ್ರಕಾಶ್ ಮಗ ರಕ್ಷಕ್, ಆ ರೀತಿ ಯಾವ ಘಟನೆಯೇ ನಡೆದಿದಲ್ಲ. ದೇವರ ಮುಂದೆ ಆಣೆ ಮಾಡಲು ಸಿದ್ದ, ಸುಮ್ಮನೇ ವಿವಾದ ಸೃಷ್ಟಿಸುತ್ತಿದ್ದಾರೆ ಹೇಳಿದ್ದಾರೆ.

ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೂರು ನೀಡಿ ಎಂದರು ಇದುವರೆಗೂ ಪ್ರಥಮ್ ದೂರು ನೀಡಿಲ್ಲ. ದೂರಿನ ಬಳಿಕ ವಾಸ್ತವ ಏನೆಂದು ತಿಳಿದು ಬರಲಿದೆ.

ಇನ್ನೂ ಎರಡನೇ ವಿಚಾರ ಮಾಜಿ ಸಂಸದೆ, ಮಾಜಿ ಎನ್ನಬಹುದಾದ ನಟಿ ರಮ್ಯ ಪೋಸ್ಟ್: ಇತ್ತೀಚಿಗೆ ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಕುರಿತು ವಿಚಾರಣೆ ನಡೆಸಿದೆ. ಈ ಕುರಿತು ನ್ಯಾಯಾಧೀಶರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅದಕ್ಕೆ ದರ್ಶನ್ ಪರ ವಕೀಲರು ಉತ್ತರ ನೀಡಿದ್ದಾರೆ.

ಈ ವಿಚಾರ ಮತ್ತೆ ಮೂರ್ ನಾಲ್ಕು ದಿನ ಕೆಲ ಖಾಸಗಿ ಚಾನಲ್‌ಗಳಿಗೆ ಆಹಾರ, ಮತ್ತೆ ಜೈಲಿಗೆ ದರ್ಶನ್ ಎಂಬ ಹೆಡ್ಲೈನ್..? ಎಂಬಂತೆ ಸರಣಿ ವರದಿ ಪ್ರಸಾರ ಮಾಡಿವೆ.

ಇದೇ ವಿಚಾರವಾಗಿ ರಮ್ಯ ಪೋಸ್ಟ್ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ ಎಂಬುದು ರಮ್ಯ ಅಳಲು.

ಇನ್ಸ್ಟಾಗ್ರಾಮ್ನಲ್ಲಿ ರಮ್ಯ ಹತ್ಯೆಗೆ ಒಳಗಾದ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ದೊರೆತಿದೆ ಎಂಬಂತೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮುಗಿಬಿದ್ದು ಕಾಮೆಂಟ್ ಮಾಡಿ ಜಾಡಿಸಿದ್ದು, ಕೆಲವರು ಸಭ್ಯತೆ ಮೀರಿ ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಕೆರಳಿದ ರಮ್ಯ ಮತ್ತೆ ಎರಡು ಪೋಸ್ಟ್ ಮಾಡಿದ್ದು, ದರ್ಶನ್ ಕಪಾಳಕ್ಕೆ ಹೊಡೆಯುವ ವಿಡಿಯೋ ಪೊಸ್ಟ್ ಮಾಡಿ, ಹತ್ಯೆಗೆ ಒಳಗಾದ ವ್ಯಕ್ತಿಗೂ, ದರ್ಶನ್ ಅಭಿಮಾನಿಗಳಿಗೂ ವೆತ್ಯಾಸ ಏನಿದೆ ಎಂದಿದ್ದಾರೆ. ಅಲ್ಲದೆ ಅವಹೇಳನಾಕಾರಿ ಕಾಮೆಂಟ್ ಈ ಕುರಿತಂತೆ ಸೈಬರ್ ಕ್ರೈಮ್‌ಗೆ ದೂರು ನೀಡಲು ಮುಂದಾಗಿದ್ದಾರೆ.

ಇಂದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಇನ್ಸ್ಟಾಗ್ರಾಮ್ ಪೇಜಲ್ಲಿ ಸಂದೇಶ ಒಂದನ್ನು ಪೋಸ್ಟ್ ಮಾಡಿದ್ದು, “ಮೂರ್ಖನನ್ನು ಅವನ ಮಾತಿನಿಂದ ಗುರುತಿಸಬಹುದು; ಮತ್ತು ಬುದ್ಧಿವಂತನನ್ನು ಮೌನದಿಂದ ಗುರುತಿಸಬಹುದು.” ಎಂದು ದರ್ಶನ್ ವಿರುದ್ಧ ಮಾತನಾಡುತ್ತಿರುವವರಿಗೆ ಎಂಬಂತೆ ತಿರುಗೇಟು ನೀಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ದರ್ಶನ್ ಗೆಳತಿ, ನಟಿ ರಕ್ಷಿತಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಕೆಲ ಇಂಗ್ಲಿಷ್​​ ಕೋಟ್​ಗಳನ್ನು ಸ್ಟೇಟಸ್​ಗೆ ಹಾಕಿದ್ದಾರೆ. ‘ನಿಮಗೆ ವ್ಯಕ್ತಿಗಳ ಮಾನಸಿಕ ಆರೋಗ್ಯ ನೋಡಲು ಸಾಧ್ಯವಿಲ್ಲ. ಯಾವಾಗಲೂ ದಯೆ ಇರಲಿ’ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾನು ನಿಜವಾಗಿಯೂ ಏನು ವೈರಲ್ ಆಗಬೇಕೆಂದು ಬಯಸುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಮೂಲಭೂತ ಮಾನವೀಯ ಸಭ್ಯತೆ’ ಎಂದು ಪ್ರಚಾರಕ್ಕಾಗಿ ಮಾಡುತ್ತಾರೆ ಎಂಬಂತೆ ಪರೋಕ್ಷವಾಗಿ ರಮ್ಯಗೆ ತಿರುಗೇಟು ನೀಡಿದ್ದಾರೆ..

ಮತ್ತೊಂದೆಡೆ ದರ್ಶನ್ ಅಭಿಮಾನಿಗಳ ಫೇಜ್ ಗಳು, ಡಿ ಬಾಸ್ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ, ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ, ಯಾರಿಗೂ ಮೆಸೇಜ್ ಮಾಡಬೇಡಿ, ಪ್ರಚಾರಕ್ಕೆ ಆಗಲಿ, ಹುನ್ನಾರ ಮಾಡಿ ಆಗಲಿ, ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳಬೇಡಿ, ಬಾಸ್ ಫ್ಯಾನ್ಸ್ ಏನೆಂದು ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿಯಿದೆ. ಈ ಅವಮಾನಗಳು ಇನ್ನಷ್ಟು ಒಳ್ಳೆ ಕೆಲಸ ಮಾಡಲು ಮೆಟ್ಟಿಲು ಆಗಲಿ ಎಂದು ಕರೆ ನೀಡಿವೆ.

ಒಟ್ಟಾರೆ ನಟ ದರ್ಶನ್ ಕುರಿತು ಕೆಲ ಖಾಸಗಿ ಚಾನಲ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಕುರಿತಂತೆಯೇ ವ್ಯಾಪಕ ಚರ್ಚೆ ನಡೆಯುತ್ತಿದೆ.

ರಾಜಕೀಯ

ಒಂದೇ ದಿನ ರೂ.1146 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಿಜೆಪಿಗೆ ಸವಾಲೆಸೆದ ಸಿಎಂ ಸಿದ್ದರಾಮಯ್ಯ

ಒಂದೇ ದಿನ ರೂ.1146 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಿಜೆಪಿಗೆ

ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಎರಚುವ ಬಿಜೆಪಿಗೆ ಇದು ನಮ್ಮ ಸರ್ಕಾರದ ಸವಾಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah)

[ccc_my_favorite_select_button post_id="111790"]
ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಯಾಣ

ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ

ಆಗಸ್ಟ್ 4 ರಿಂದ 6ನೇ ತಾರೀಖಿನವರೆಗೆ ಅಮೇರಿಕಾದ ಬೋಸ್ಟನ್ ನಗರದಲ್ಲಿ ನಡೆಯುವ "ಶಾಸಕಾಂಗ ಶೃಂಗಸಭೆ 2025”ರಲ್ಲಿ (Legislative Summit 2025) ಪಾಲ್ಗೊಳ್ಳಲು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಇಂದು ಬೆಳಗಿನ ಜಾವ

[ccc_my_favorite_select_button post_id="111777"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ಜು.25ರಿಂದ 28ರವರೆಗೆ ನಡೆಯಲಿರುವ ಪುರುಷರ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್(Kabaddi Championship) ಪಂದ್ಯಾವಳಿ

[ccc_my_favorite_select_button post_id="111553"]
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ಸ್ಥಳ ಮಹಜರು ಆರಂಭಿಸಿದ ಎಸ್.ಐ.ಟಿ

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ಸ್ಥಳ ಮಹಜರು ಆರಂಭಿಸಿದ ಎಸ್.ಐ.ಟಿ

ಧರ್ಮಸ್ಥಳದ (Dharmasthala) ನೇತ್ರಾವತಿ ಸ್ನಾನಘಟ್ಟದ ಬಳಿಯ ತೆಂಗಿನ ತೋಟದ ಪೊದೆಗಳಲ್ಲಿ ಮಹಜರು ಕಾರ್ಯವನ್ನು ತನಿಖಾಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ

[ccc_my_favorite_select_button post_id="111774"]
ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಧುರೆ ರಸ್ತೆಯಲ್ಲಿನ ಖಾಸಗಿ

[ccc_my_favorite_select_button post_id="111623"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!