ದೊಡ್ಡಬಳ್ಳಾಪುರ: ವರನಟ ಡಾ.ರಾಜ್ ಕುಮಾರ್ (Dr. Rajkumar) ಸಮಾಧಿಗೆ ಜಾಗ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಟ ಚೇತನ್ ಅಹಿಂಸಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚೇತನ್ ಅಹಿಂಸಾ (Chethan Ahimsa) ವಿರುದ್ಧ ಕನ್ನಡಪರ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಡಾ.ರಾಜ್ ಕುಮಾರ್ ಸಮಾಧಿಗೆ ಸರ್ಕಾರ 2.5 ಎಕರೆ ಜಾಗ ನೀಡಿದ್ದಕ್ಕೆ ನಟ ಚೇತನ್ ಅಹಿಂಸಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು.
2.5 ಎಕರೆ ಜಾಗ ನೀಡಿದ್ದು ತಿಳುವಳಿಕೆಯ ನಿರ್ಧಾರವಾಗಿತ್ತಾ? 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರ ಸಾರ್ವಜನಿಕರ ಉಪಯೋಗಕ್ಕೆ ಭೂಮಿ ಹಂಚಬೇಕು ಮತಗಳ ಉದ್ದೇಶದಿಂದ ಹಂಚಬಾರದು ಎಂದು ಪೋಸ್ಟ್ ಹಾಕಿದ್ದರು.
ನಟ ಚೇತನ್ ಅಹಿಂಸಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚೇನತ್ ವಿರುದ್ಧ ಡಾ.ರಾಜ್ ಕುಮಾರ್ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ದೊಡ್ಡಬಳ್ಳಾಪುರ ನಗರ ಪೊಲಿಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಅಮರೇಶ್ ಗೌಡ ಅವರಿಗೆ ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಗಡಿಪಾರು ಮಾಡುವಂತೆ ಒತ್ತಾಯಿಸಿವೆ.
ಈ ವೇಳೆ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸು. ನರಸಿಂಹಮೂರ್ತಿ, ಕನ್ನಡಪರ ಸಂಘಟನೆಗಳ ಮುಖಂಡರಾದ ತ.ನ.ಪ್ರಭುದೇವ, ಸಂಜೀವನಾಯ್ಕ್, ರಾಜಘಟ್ಟರವಿ, ಡಿ.ಪಿ. ಆಂಜನೇಯ, ಪ್ರಮಿಳಾ ಮಹದೇವ್, ಪರಮೇಶ್, ಚೌಡರಾಜ್, ರಮೇಶ್, ಜನಪರ ಮಂಜು, ಗುರು, ನವೀನ್, ಸೂರಿ, ಮಂಜು, ಮನು, ನಾಗಣ್ಣ ಮತ್ತಿತರರಿದ್ದರು.
ದೊಡ್ಡಬಳ್ಳಾಪುರದಲ್ಲಿ ವೀರಬ್ರಹ್ಮೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ದೊಡ್ಡಬಳ್ಳಾಪುರ: ವೀರಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್ (Veerabrahmendraswamy Seva Trust) ವತಿಯಿಂದ ಮದ್ವಿರಾಟ್ ಪೋತಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳ (Veera Brahmanendra Swamy) 15ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ನಗರದ ಕನ್ನಡ ಜಾಗೃತ ಭವನದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ವಿಶೇಷವಾಗಿ ಅಲಂಕರಿಸಿದ್ದ ವೀರಬ್ರಹ್ಮೇಂದ್ರಸ್ವಾಮಿ ಅವರ ಭಾವಚಿತ್ರಕ್ಕೆ ವಿಶ್ವಕರ್ಮ ಸಮುದಾಯದವರಿಂದ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಲಾಯಿತು. ವಿವಿಧ ಕಲಾವಿದರಿಂದ ವೀರಬ್ರಹ್ಮೇಂದ್ರಸ್ವಾಮಿಗಳ ಗೀತೆಗಳ ಗಾಯನ ನಡೆಯಿತು.
ವೀರಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ವೀರಬ್ರಹ್ಮೇಂದ್ರಸ್ವಾಮಿ ಅವರ ಆರಾಧನೆಯ ಮೂಲಕ ಅವರ ತತ್ವಗಳನ್ನು ತಿಳಿಸಲು ಟ್ರಸ್ಟ್ ವತಿಯಿಂದ 15 ವರ್ಷಗಳಿಂದ ಆರಾಧನಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಜ್ಞಾನದ ಕೊರತೆಯಿಂದ ವೈಜ್ಞಾನಿಕ ಸತ್ಯಗಳಿಂದ ದೂರ ಉಳಿದಿದ್ದೇವೆ ಎಂದರು.
ಇದೇ ವೇಳೆ ವಿಶ್ವಕರ್ಮ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮದ ಅಧ್ಯಕ್ಷರು, ಪಿ.ಸುಜ್ಞಾನ ಮೂರ್ತಿ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಈಶ್ವರಾಚಾರ್, ಉಮೇಶ್. ಬಿ, ಬಾಬು ಪತ್ತಾರ್, ಮಹಿಳಾ ರಾಜ್ಯಾಧ್ಯಕ್ಷರಾದ ಮತಿ ಶೋಭಾ, ರಾಜ್ಯ ಉಪಾಧ್ಯಕ್ಷ ರವಿಶಂಕರ್, ಶರತ್ ಚಂದ್ರ, ಲಕ್ಷ್ಮಣ್, ಚಂದ್ರಶೇಖರ್, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ್ ಹಾಗೂ ಟ್ರಸ್ಟಿನ ಗೌರವ ಅಧ್ಯಕ್ಷ ಬೋಜಾಚಾರ್, ಅಧ್ಯಕ್ಷ ವೆಂಕಟಾಚಲಪತಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಕುಮಾರ್.
ಪರಮಶಿವಮೂರ್ತಿ, ಯಶೋಧ್ ಕುಮಾರ್, ವೇಣುಗೋಪಾಲಾಚಾರ್, ಮೋಹನಾಚಾರ್, ಜಗದೀಶಚಾರ್, ಮಂಜುನಾಥ್, ಮನೋಹರ್, ವೆಂಕಟೇಶ್ ಮೂರ್ತಿ, ನಾರಾಯಣಚಾರ್, ರಮೇಶಚಾರ್, ಮಂಜುನಾಥ್, ಮೋಹನ್, ರಾಘವೇಂದ್ರಚಾರ್, ಪುಟ್ಟಶಾಮಾಚಾರ್, ಸಿದ್ದರಾಜು, ನವೀನ್ ಚಂದ್ರ, ಬ್ರಹ್ಮಚಾರ್, ಸೋಮಶೇಖರಚಾರ್, ಹರೀಶ್, ನವೀನ್ ಮತ್ತು ಶಂಕರಾಚಾರ್ ಹಾಗೂ ವಿಶ್ವಕರ್ಮ ಸಮುದಾಯದವರು ಭಾಗವಹಿಸಿದ್ದರು

