ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಬುಧವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 78 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ನಗರದ ಇಬ್ಬರು ಸಾವನಪ್ಪಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಬುಧವಾರದ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 61 ಪುರುಷರು ಹಾಗೂ 17 ಮಹಿಳೆಯರು ಸೇರಿ 78 ಜನರಿಗೆ ಸೋಂಕು ದೃಡಪಟ್ಟಿದೆ.
ನೆಲಮಂಗಲದ ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಕನಕದಾಸನಗರದ 90 ವರ್ಷದ ಪುರುಷ, ರೋಜಿಪುರದ 92 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ ಭುವನೇಶ್ವರಿ ನಗರದಲ್ಲಿ 6, ಖಾಸ್ ಭಾಗ್, ಚೈತನ್ಯನಗರದಲ್ಲಿ ತಲಾ 5, ಬಾಶೆಟ್ಟಿಹಳ್ಳಿ 4, ದೊಡ್ಡಬೆಳವಂಗಲ, ರೋಜಿಪುರ, ಸೋಮೇಶ್ವರ ಬಡಾವಣೆ, ತೆರಿನಬೀದಿ, ವಿದ್ಯಾನಗರ ತಲಾ 3, ಚಿಕ್ಕಪೇಟೆ, ಹೇಮಾವತಿ ಪೇಟೆ, ಕುಚ್ಚಪ್ಪನಪೇಟೆ,ಮಂಡಿ ಬ್ಯಾಡರಹಳ್ಳಿ, ಮಾರುತಿನಗರ,ಮುತ್ತೂರು, ಪಾಲನಜೋಗಹಳ್ಳಿ, ರೈಲ್ವೇ ಸ್ಟೇಷನ್, ರಾಜೀವಗಾಂಧಿ ಕಾಲೋನಿ, ಶ್ರೀನಗರ ತಲಾ 2, ಅರಳುಮಲ್ಲಿಗೆ, ಬಸವೇಶ್ವರನಗರ,ಬೆಸ್ತರಪೇಟೆ, ಭೂಮೇನಹಳ್ಳಿ, ಚಿಕ್ಕನಹಳ್ಳಿ,ಕೊಲಂಬಿಯಾ ಏಷ್ಯಾ ಬಾಯ್ಸ್ ಹಾಸ್ಟೆಲ್ ಬಾಶೆಟ್ಟಿಹಳ್ಳಿ,ದರ್ಗಾಪುರ, ದರ್ಜಿಪೇಟೆ, ಕೋಟೆ ರಸ್ತೆ, ಗಾಂಧಿನಗರ,ಹೊನ್ನದೇವಿಪುರ,ಇಸ್ಲಾಂಪುರ, ಕಲಾಸಿಪಾಳ್ಯ, ಕಲ್ಲುಪೇಟೆ, ಕನಕದಾಸ ನಗರ,ಕರೇನಹಳ್ಳಿ, ಕೊಂಗಾಡಿಯಪ್ಪ ಕಾಲೇಜ್ ರೋಡ್, ಕೊನಘಟ್ಟ, ಲಿಂಗನಹಳ್ಳಿ, ಮಾನಸ ಆಸ್ಪತ್ರೆ, ಮುಕ್ತಾಂಬಿಕಾ ಲೇಔಟ್,ರಘುನಾಥಪುರ, ರಾಜೀವಗಾಂಧಿ ನಗರ,ಸಂಜಯನಗರ, ಸಿನಿಮಾರೋಡ್,ತ್ಯಾಗರಾಜನಗರ, ಉಜ್ಜನಿ ಹಾಗೂ ವೀರಭದ್ರನಪಾಳ್ಯ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 3121 ಮಂದಿಗೆ ಸೋಂಕು ತಗುಲಿದ್ದು, 2216 ಮಂದಿ ಗುಣಮುಖರಾಗಿದ್ದರೆ 93 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 756 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

