ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಗುರುವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನಲ್ಲಿ ದಾಖಲೆಯ 349 ಜನ ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು 92 ಮಂದಿಗೆ ಸೋಂಕು ದೃಢಪಟ್ಟಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಗುರುವಾರದ ಸಂಜೆಯ ವರಗೆ. ದೊಡ್ಡಬಳ್ಳಾಪುರ ತಾಲ್ಲೂಕಿನ 52 ಪುರುಷರು ಹಾಗೂ 40 ಮಹಿಳೆಯರು ಸೇರಿ 92 ಜನರಿಗೆ ಸೋಂಕು ದೃಡಪಟ್ಟಿದೆ.
ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ ನೀಡಿರುವ ಮಾಹಿತಿಯಂತೆ ಆಕಾಶ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ದರ್ಗಾಜೋಗಹಳ್ಳಿಯ 65 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ, ಕುಂಟನಹಳ್ಳಿಯಲ್ಲಿ 10, ಬಾಶೆಟ್ಟಿಹಳ್ಳಿಯಲ್ಲಿ 8, ಖಾಸ್ ಬಾಗ್, ಮುತ್ತೂರು, ಶಾಂತಿನಗರ ತಲಾ 4, ತೂಬಗೆರೆ 3, ಹುಲಿಕುಂಟೆ, ಕೋಡಿಹಳ್ಳಿ, ಮೆಳೇಕೋಟೆ, ಮುತ್ಸಂದ್ರ, ಪಾಲನಜೋಗಹಳ್ಳಿ, ಪ್ರಿಯದರ್ಶಿನಿ ಬಡಾವಣೆ, ಶಿವಪುರ, ತಿಪ್ಪೂರು, ತೂಬಗೆರೆ ಪೇಟೆಯಲ್ಲಿ ತಲಾ 2, ಆಲಹಳ್ಳಿ, ಆರೂಢಿ, ಬ್ಯಾಂಕ್ ಸರ್ಕಲ್, ಬ್ರಾಹ್ಮಣರ ಬೀದಿ, ಭಕ್ತರಹಳ್ಳಿ, ಚೈತನ್ಯನಗರ, ದೇವರಾಜನಗರ, ದೊಡ್ಡಬಳ್ಳಾಪುರ ( ವ್ಯಾಪ್ತಿ ನೀಡಿಲ್ಲ), ಎಳ್ಳುಪುರ, ಗಾಂಯನಗರ, ಗಂಗಾಧರಪುರ, ಹಾಡೋನಹಳ್ಳಿ, ಹೆಗ್ಗಡಿಹಳ್ಳಿ, ಹೊಸಹಳ್ಳಿ ತಾಂಡ, ಜೆಪಿ ಪ್ಯಾಲೇಸ್, ಕಾರನಾಳ, ಕರೇನಹಳ್ಳಿ, ಕಸುವನಹಳ್ಳಿ, ಕೆಸ್ತೂರು, ಕುಚ್ಚಪ್ಪನಪೇಟೆ, ಮಾದಗೊಂಡನಹಳ್ಳಿ, ಮಜರಾಹೊಸಹಳ್ಳಿ, ಮಲ್ಲತ್ ಹಳ್ಳಿ, ಮಾರಹಳ್ಳಿ, ಮುತ್ತಗದಹಳ್ಳಿ, ನಗರ್ತರಪೇಟೆ, ನೆಲ್ಲುಕುಂಟೆ, ಪುಟ್ಟಯ್ಯನ ಅಗ್ರಹಾರ, ರಾಜಘಟ್ಟ, ಎಸ್ ಎಣ್ ಘಾಟಿ, ಸಂಜಯನಗರ, ಸಾಸಲು, ಸುಬ್ಬಯ್ಯನಗರ, ತ್ಯಾಗರಾಜನಗರ, ವಡ್ಡರಪಾಳ್ಯ, ವನ್ನಿಗರಪೇಟೆ ಹಾಗೂ ವೀರಭದ್ರನ ಪಾಳ್ಯದ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 3213 ಮಂದಿಗೆ ಸೋಂಕು ತಗುಲಿದ್ದು, 2565 ಮಂದಿ ಗುಣಮುಖರಾಗಿದ್ದರೆ ಇಂದಿನ ಬುಲೆಟಿನ್ ಮಾಹಿತಿಯಲ್ಲಿ ಸಾವಿನ ಪ್ರಕರಣ ಮಾಹಿತಿ ತೆಗೆಯಲಾಗಿದೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 592 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

