ದೊಡ್ಡಬಳ್ಳಾಪುರ: ತಾಲೂಕು ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ರಾಜಘಟ್ಟ ಯಶವಂತ್ ಅವರನ್ನು ನೇಮಕ ಮಾಡಲಾಗಿದೆ.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಯುವಾ ಮೋರ್ಚಾ ಸಭೆಯಲ್ಲಿ ಆದೇಶ ಪತ್ರವನ್ನು ತಾಲೂಕು ಅಧ್ಯಕ್ಷ ಟಿ.ಎನ್.ನಾಗರಾಜು ನೀಡಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ಕಾಂತರಾಜು, ಯುವಾ ಮೋರ್ಚಾ ಅಧ್ಯಕ್ಷ ಕಿರಣ್ ಬಿ.ಎ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ನಾಗಸಂದ್ರ ಲೋಕೇಶ್, ಚಂದು, ಉಪಾಧ್ಯಕ್ಷ ವಿನಯ್ ಗೌಡ, ಯುವ ಮೋರ್ಚಾ ಪದಾಧಿಕಾರಿಗಳಾದ ಚಂದ್ರು ಮಂಚನಬೆಲೆ, ವಿಜೇತ್, ಮಹೇಶ್ , ಗೋವಿಂದರಾಜು, ಮನು ಮತ್ತಿತರಿದ್ದರು.

