ದೊಡ್ಡಬಳ್ಳಾಪುರ: ಕೋವಿಡ್-19 ಸೋಂಕಿತರ ಅಂತ್ಯ ಸಂಸ್ಕಾರದ ನಂತರ, ಬಳಸಿದ ಪಿಪಿಇ ಕಿಟ್ಟನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಘಟನೆ ನಗರದ ಹೊರವಲಯದ ದೇವಾಂಗ ಮುಕ್ತಿದಾಮ ಎದುರುಗಡೆ ಕಂಡು ಬಂದಿದೆ.
ತಾಲೂಕಿನ ಚಿಕ್ಕತುಮಕೂರು ರಸ್ತೆಯಲ್ಲಿರುವ, ದೇವಾಂಗ ಮುಕ್ತಿದಾಮ ಎದುರು ರಸ್ತೆ ಪಕ್ಕದಲ್ಲೆ ಪಿಪಿಇ ಕಿಟ್ ಎಸೆದಿರುವವರು ಯಾರು ಎಂಬುದು ತಿಳಿದು ಬಂದಿಲ್ಲ. ಆದರೆ ಬಳಸಿದ ಪಿಪಿಇ ಕಿಟ್ ಅನ್ನು ಬೇಜವಬ್ದಾರಿಯಿಂದಾಗಿ ಈ ರಸ್ತೆ ಬದಿಯಲ್ಲಿ ಎಸೆದಿರುವ ಕಾರಣ ಸಂಚರಿಸುತ್ತಿರುವ ವಾಯುವಿಹಾರಿಗಳು, ಗ್ರಾಮಸ್ಥರು ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….