ದೊಡ್ಡಬಳ್ಳಾಪುರ: ಐದನೆ ದಿನದ ಎಸ್ ಎಸ್ ಎಸ್ ಎಲ್ ಸಿ ಕನ್ನಡದ ವಿಷಯದ ಪರೀಕ್ಷೆ ಇದೀಗ ಆರಂಭವಾಗಿದ್ದು,3366ಕ್ಕು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕಿನ ಕಾರಣ,ಹಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಿದ್ದರು ಸಹ ಪರೀಕ್ಷಾರ್ಥಿಗಳು ಮುಂಜಾಗ್ರತೆವಹಿಸಿ ಉತ್ಸಾಹದಿಂದ ಪರೀಕ್ಷೆಗೆ ಹಾಜರಾದರು.
ಇನ್ನು ಸೀಲ್ ಡೌನ್ ವ್ಯಾಪ್ತಿಯಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳನ್ನು ಗುರುತಿಸಿ,ಅವರಿಗೆ N95 ಮಾಸ್ ವಿತರಿಸಿ ಪ್ರತ್ಯೇಕವಾದ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆಯನ್ನು ಇಂದೂ ಸಹ ಮುಂದುವರೆಸಲಾಗಿದೆ ಕ್ಷೇತ್ರಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಹರಿತಲೇಖನಿಗೆ ತಿಳಿಸಿದ್ದಾರೆ.