ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೆರವೇರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಮನ ಅತ್ಯುತ್ತಮ ಮಾನವ ಗುಣಗಳ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ಭೂಮಿ ಪೂಜೆ ಕುರಿತು ಟ್ವೀಟ್ ಮಾಡಿರುವ ಅವರು, ಭಗವಾನ್ ರಾಮ ಅತ್ಯುತ್ತಮ ಮಾನವ ಗುಣಗಳ ಪ್ರತೀಕ. ಆ ಗುಣಗಳು ನಮ್ಮ ಮನಸ್ಸಿನ ಆಳದಲ್ಲಿ ಮಾನವೀಯತೆಯ ತಿರುಳನ್ನು ಬೆಳೆಸುತ್ತವೆ.
ರಾಮ ಎಂದರೇ ಪ್ರೀತಿ, ಅದು ಎಂದಿಗೂ ಅಸಹ್ಯವಾಗಿ ಕಾಣುವುದಿಲ್ಲ.ರಾಮ ಎಂದರೇ ಸಹಾನುಭೂತಿ ಅದು ಎಂದಿಗೂ ಕ್ರೂರವಾಗಿ ಕಾಣಿಸುವುದಿಲ್ಲ. ರಾಮ ಎಂದರೇ ನ್ಯಾಯ ಅಲ್ಲಿ ಎಂದಿಗೂ ಅನ್ಯಾಯಕ್ಕೆ ಜಾಗವಿಲ್ಲ ಎಂದಿದ್ದಾರೆ.