ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಚಿಸಲಾಗುವ ಸಂಘಗಳನ್ನು ಕೇವಲ ಸಾಲ ಸೌಲಭ್ಯಕ್ಕಾಗಿ ಮಾತ್ರ ಬಳಸಿಕೊಳ್ಳದೆ,ಸಲಹೆ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವ ಜೊತೆಗೆ ಜ್ಞಾನ ಸಂಪಾದನೆ ಮಾಡಬೇಕೆಂದು ನಿವೃತ್ತ ಮುಖ್ಯಶಿಕ್ಷಕ ಎಚ್.ಎಂ.ಮಹದೇವಯ್ಯ ಸಲಹೆ ನೀಡಿದರು.
ತಾಲೂಕಿನ ರಾಮದೇವನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರಕೃತಿ ಜ್ಞಾನ ವಿಕಾಸ ಕೇಂದ್ರವನ್ನು ಹಮ್ಮಿಕೊಂಡಿದ್ದು.ಈ ಕಾರ್ಯಕ್ರಮದ ಅಂಗವಾಗಿ ಇಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಬಡ ಜನರನ್ನು ಗುರುತಿಸಿ ಅವರ ಆರ್ಥಿಕ ಅಭಿವೃದ್ಧಿ ಮಾಡುವುದು ಶ್ರೀ ಕ್ಷೇತ್ರದ ಯೋಜನೆಯ ಮೂಲ ಉದ್ದೇಶ.ಆದರೆ,ಸಂಘಗಳು ಎಂದರೆ ಕೇವಲ ಸಾಲಕ್ಕಾಗಿ ಮಾತ್ರ ಎಂಬ ಮನಸ್ಥಿತಿಯಿಂದ ಜನತೆ ಹೊರಬರಬೇಕೆಂದರು.
ಈ ವೇಳೆ ನಿವೃತ್ತ ಸಬ್ ಇನ್ಸ್ಪೆಕ್ಟರ್ ಬೊಮ್ಮೇಗೌಡ,ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ರೇಣುಕಯ್ಯ,ಶಿಕ್ಷಕ ರಮೇಶ್,ಅಂಗನವಾಡಿ ಕಾರ್ಯಕರ್ತೆ ಗಂಗ ಲಕ್ಷ್ಮಮ್ಮ, ದೊಡ್ಡಬಳ್ಳಾಪುರ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಶ್ವೇತಾ, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹೇಮಲತಾ ಮತ್ತಿತರಿದ್ದರು.