ಹೈದರಾಬಾದ್: ಭಾರತ ತಂಡದ ವೇಗದ ಬೌಲರ್, ಆರ್‌ಸಿಬಿ ಸ್ಟಾರ್ ಆಟಗಾರ ಮೊಹಮ್ಮದ್ ಸಿರಾಜ್ ಈಗ ತೆಲಂಗಾಣದಲ್ಲಿ ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (DSP) ಅಧಿಕಾರ ವಹಿಸಿಕೊಂಡಿದ್ದಾರೆ.
ಶುಕ್ರವಾರ ಪೊಲೀಸ್ ಮಹಾ ನಿರ್ದೇಶಕರಿಗೆ (DSP) ರಿಪೋರ್ಟ್ ಮಾಡಿ ಕೊಂಡಿದ್ದಾರೆ.
ಮೊಹಮ್ಮದ್ ಸಿರಾಜ್ ಅವರಿಗೆ ಪ್ರತಿಷ್ಠಿತ ಗ್ರೂಪ್-1 ಸರಕಾರಿ ಹುದ್ದೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಘೋಷಣೆ ಮಾಡಿದ್ದರು.
ಬಳಿಕ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ. ಸಿರಾಜ್ ಡಿಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿರಾಜ್ ಅಧಿಕಾರ ಸ್ವೀಕರಿಸುವ ಮುನ್ನ ಸಿಎಂ ರೇವಂತ್ ರೆಡ್ಡಿ ಮಾತನಾಡಿ, ಕ್ರೀಡಾ ಪಟುಗಳಿಗೆ ಬೆಂಬಲ ಕೊಡಲು ರಾಜ್ಯ ಸರಕಾರ ಬದ್ದ ವಾಗಿದೆ ಎಂದು ಹೇಳಿದರು.
ಭಾರತ ತಂಡವು 2024ರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಬಳಿಕ ಮೊಹಮ್ಮದ್ ಸಿರಾಜ್ ಅವರಿಗೆ ಡಿಎಸ್‌ಪಿ ಕೆಲಸ ಕೊಡುವುದಾಗಿ ಭರವಸೆ ಕೊಟ್ಟಿತ್ತು. ಇದರ ಹೊರತಾಗಿ ಜುಬಿಲಿ ಹಿಲ್ಸ್‌ನಲ್ಲಿ 1800 ಚದರ ಅಡಿ ಭೂಮಿಯನ್ನು ಕೂಡ ನೀಡಿದೆ.