ಚಿಕ್ಕಬಳ್ಳಾಪುರ: KSRTC ಬಸ್ ಚಕ್ರ ಹರಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಅದರ್ಶ ಚಿತ್ರಮಂದಿರದ ಬಳಿ ನಡೆದಿದೆ.
ಕೊಮ್ಮಸಂದ್ರ ಗ್ರಾಮದ 40 ವರ್ಷದ ವೆಂಕಟೇಶ್ ಹಾಗೂ ಪತ್ನಿ 34 ವರ್ಷದ ಸರಸತ್ವತಮ್ಮ ಮೃತರು.
ಮೃತ ಸರಸ್ವತಮ್ಮ ಸ್ವಗ್ರಾಮದ ನಾರಾಯಣಹಳ್ಳಿಯಲ್ಲಿ ಇರಮುಡಿ ಕಾರ್ಯಕ್ರಮ ನಿಮಿತ್ತ ದಂಪತಿ ಬೈಕ್ ಮೂಲಕ ತೆರಳುತ್ತಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದ ಕಾರಣ ದಂಪತಿ ಕೆಳಗೆ ಬಿದ್ದಿದ್ದು ಹಿಂಬದಿ ಬರ್ತಿದ್ದ ಬಸ್ ಇಬ್ಬರ ತಲೆಯ ಮೇಲೆ ಹರಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.