ಚಿತ್ರದುರ್ಗ: ಆಸ್ತಿ ಕಳೆಯಬೇಡ, ಹಣ ದುಂದುವೆಚ್ಚ ಮಾಡಬೇಡ ಎಂದು ಬುದ್ದಿ ಹೇಳಿದ ಪತ್ನಿಯನ್ನೇ ಧೂರ್ತ ಪತಿ ಉಸಿರು ಗಟ್ಟಿಸಿ ಕೊಲೆಗೈದ (Murder) ಪ್ರಕರಣ ಚಿತ್ರದುರ್ಗ ತಾಲೂಕಿನ ಮೆದೇಹಳ್ಳಿಯಲ್ಲಿ ನಡೆದಿದೆ.
ಶ್ರೀದೇವಿ (48 ವರ್ಷ) ಮೃತ ದುರ್ದೈವಿ ಎನ್ನಲಾಗಿದೆ.
ಉಮಾಪತಿ ಶ್ರೀದೇವಿ ವಿವಾಹವಾಗಿ, ಅನ್ನೋನ್ಯವಾಗಿದ್ದರು. ಆದರೆ ಉಮಾಪತಿ ತನ್ನ ಜಮೀನು ಮಾರಾಟದಿಂದಾಗಿ ಬಂದ ಹಣವನ್ನೆಲ್ಲಾ ಮನಬಂದಂತೆ ಖರ್ಚು ಮಾಡುತ್ತಾನೆಂಬ ಹಿನ್ನೆಲೆ ಪತ್ನಿ ಶ್ರೀದೇವಿ ಆಗಾಗ್ಗೆ ಎಚ್ಚರಿಸುತ್ತಿದ್ದಳು.
ಈ ವಿಚಾರಕ್ಕೆ ಇಬ್ಬರ ಮಧ್ಯೆ ಕಲಹ ನಿರಂತರವಾಗಿತ್ತು. ಉಳಿದ ಜಮೀನನ್ನು ತನ್ನ ಹೆಸರಿಗೆ ಹಾಗೂ ಮಗಳ ಹೆಸರಿಗೆ ಮಾಡಿಕೊಡಿ ಎಂದು ಶ್ರೀದೇವಿ ಒತ್ತಡ ಹೆಚ್ಚಿಸಿದ್ದರಿಂದ ಆಕ್ರೋಶಗೊಂಡ ಉಮಾಪತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫೆ.7 ರಂದು ಬೆಳಗ್ಗೆ ಶ್ರೀದೇವಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ, ಆಕೆಯ ಸೀರೆ ಯಿಂದ ಕೊರಳಿಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.