ಬೆಂ.ಗ್ರಾ.ಜಿಲ್ಲೆ; ನೆಲಮಂಗಲ- ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಜಯನಗರ ಸರ್ಕಲ್ ಸಮೀಪದ ರಸ್ತೆಯಲ್ಲಿ ಅಪರಿಚಿತ ಹೆಂಗಸಿಗೆ ರಸ್ತೆ ಅಪಘಾತವಾಗಿ (Accident) ಮೃತ ಪಟ್ಟಿದ್ದು, ವಾರಸುದಾರರ ಪತ್ತೆಗಾಗಿ ಮೃತ ದೇಹವನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಕೋಲ್ಡ್ ಸ್ಟೋರೇಜ್ ಪೆಟ್ಟಿಗೆಯಲ್ಲಿ ಇಟ್ಟಿರುತ್ತಾರೆ.
ಈ ಅಪಘಾತದ ಬಗ್ಗೆ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿದೆ.
ಅಪರಿಚಿತ ಹೆಂಗಸಿಗೆ ಸುಮಾರು 55 ವರ್ಷ ವಯಸ್ಸಾಗಿದ್ದು, ಕೋಲು ಮುಖ, ಸಾಧಾರಣ ಮೈ ಬಣ್ಣ, ಕೆಂಪು ಹಳದಿ ಮಿಶ್ರಿತ ಬಣ್ಣದ ಸೀರೆ ಧರಿಸಿರುತ್ತಾರೆ ಹಾಗೂ ನಶೆ ಬಣ್ಣದ ಸ್ವೆಟರ್ ಧರಿಸಿರುತ್ತಾರೆ.
ತಲೆಯನ್ನು ಬೋಳು ಮಾಡಿದ್ದು, ಅಪರಿಚಿತ ಹೆಂಗಸಿನ ವಾರಸುದಾರರು ಪತ್ತೆಯಾದಲ್ಲಿ ತಕ್ಷಣ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯ ಪೋನ್ ನಂಬರ್: 080-27722134, ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪೋನ್ ನಂಬರ್:9480802474.
ಪೊಲೀಸ್ ಠಾಣೆಯ ಇಮೇಲ್ [email protected] ಅಥವಾ ಬೆಂಗಳೂರು ಜಿಲ್ಲಾ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದಾಗಿದೆ ಎಂದು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.