ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ವಿಷ್ಣು ಚರಣ್.ಎಚ್.ಎಂ (Vishnu Charan H.M) ಅವರು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ (India Book of Records) ದಾಖಲೆಯನ್ನು ಬರೆದಿದ್ದಾನೆ.
ಟೇಕ್ವಾಂಡೋ ಪಂದ್ಯದಲ್ಲಿ ಎದುರಾಳಿಗೆ 10 ನಿಮಿಷಗಳಲ್ಲಿ 700 ರೌಂಡ್ಸ್ ಕಿಕ್ ಗಳನ್ನು ಮಾಡಿ ದಾಖಲೆಯನ್ನು ಮಾಡಿರುತ್ತಾನೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದು, ವಿದ್ಯಾರ್ಥಿಗೆ ಪ್ರಶಸ್ತಿ ಪತ್ರ, ಮೆಡಲ್, ಸ್ಟಿಕರ್, ಬ್ಯಾಡ್ಜ್ ಮತ್ತು ಆಕರ್ಷಕ ಪೆನ್ ಮತ್ತು ಬುಕ್ ಆಫ್ ರೆಕಾರ್ಡ್ಸ್ ನ ಪ್ರತಿಯನ್ನು ನೀಡಿರುತ್ತಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದ ವಿದ್ಯಾರ್ಥಿ ವಿಷ್ಣು ಚರಣ್ ಅವರನ್ನು ಶಾಲೆಯ ಆವರಣದಲ್ಲಿ ಮುಖ್ಯಶಿಕ್ಷಕ ನಾರಾಯಣಸ್ವಾಮಿ ಸೇರಿದಂತೆ ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದರು.
ದೊಡ್ಡಬಳ್ಳಾಪುರ ನಗರದ ಯುವ ವಕೀಲರಾದ ಮಧುಸೂದನ ಹೆಚ್.ಎಂ ಹಾಗೂ ಎಂ ಹೇಮಲತಾ ದಂಪತಿಗಳ ಪುತ್ರನಾದ ವಿಷ್ಣು ಚರಣ್, ಪ್ರತಿನಿತ್ಯ ಎರಡೂವರೆ ಗಂಟೆಯಿಂದ ಮೂರು ಗಂಟೆವರೆಗೆ ಕಠಿಣ ಅಭ್ಯಾಸ ಮಾಡಿ ಈ ಸಾಧನೆಯನ್ನು ಮಾಡಿದ್ದಾನೆಂದು ಶಾಲೆಯ ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು.