ವಡೋದರ: ಗುಜರಾತ್‌ನ ವಡೋದರಲ್ಲಿ ಸೇತುವೆ (Bridge Collapse) ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆ ವಡೋದರದಲ್ಲಿ ಮಹಿಸಾಗರ್ ನದಿಯ ಮೇಲೆ ಗಂಭೀರಾ ಸೇತುವೆಯನ್ನ ನಿರ್ಮಾಣ ಮಾಡಲಾಗಿತ್ತು. ಇದರ ಸ್ಲಾಬ್ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಈ ಅಪಘಾತ ಉಂಟಾಗಿದೆ.
ಈ ಅಪಘಾತದಲ್ಲಿ ಎರಡು ಟ್ರಕ್‌ಗಳು ಮತ್ತು ಎರಡು ವ್ಯಾನ್‌ಗಳು ಸೇರಿದಂತೆ ಐದರಿಂದ ಆರು ವಾಹನಗಳು ನದಿಗೆ ಬಿದ್ದಿವೆ ಎಂದು ವರದಿಯಾಗಿದೆ.
ಈ ಕುರಿತಂತೆ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮಾಹಿತಿ ನೀಡಿ, ಘಟನೆಯಲ್ಲಿ ನದಿಗೆ ಬಿದ್ದಿದ್ದ 6 ಜನರನ್ನ ರಕ್ಷಣೆ ಮಾಡಲಾಗಿದ್ದು, ಮೃತಪಟ್ಟವರಿಗೆ ತಲಾ 2 ಲಕ್ಷ ಪರಿಹಾರವನ್ನ ಘೋಷಿಸಲಾಗಿದೆ.
ಇನ್ನು ಈಜುಗಾರರು, ದೋಣಿಗಳು ಮತ್ತು ಮಹಾನಗರ ಪಾಲಿಕೆಯ ತಂಡವು ಸೇತುವೆ ಕುಸಿದ ಕ್ಷಣದಿಂದ ಕಾರ್ಯಚರಣೆ ಮಾಡಿದ್ದು, ತುರ್ತು ಪ್ರತಿಕ್ರಿಯೆ ಕೇಂದ್ರ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಸ್ಥಳದಲ್ಲಿ ಇದ್ದು ಎಲ್ಲಾ ರೀತಿಯ ರಕ್ಷಣಾ ಕಾರ್ಯ ಮಾಡುತ್ತುವೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಈ ಸೇತುವೆ ಶಿಥಿಲಗೊಂಡಿದ್ದು, ದುರಸ್ತಿ ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದರು, ಸ್ಥಳೀಯ ಆಡಳಿತ ನಿರ್ಲಕ್ಷಿಸಿತ್ತು ಎಂಬ ಆರೋಪ ಸ್ಥಳೀಯರದ್ದಾಗಿದೆ.