ಚಿಕ್ಕಬಳ್ಳಾಪುರ: ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷವಲ್ಲ. ನಮ್ಮ ಪಕ್ಷದ ಶಾಸಕರಲ್ಲಿ 50ರಷ್ಟು ಮಂದಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಿಂದ ಆಯ್ಕೆಯಾಗುತ್ತಾರೆ ಈ ಭಾಗಗಳಿಗೆ ನಾನು ನಿರಂತರವಾಗಿ ಭೇಟಿ ನೀಡುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು.
ಚಿಕ್ಕಬಳ್ಳಾಪುರವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕೆ ನರೇಂದ್ರ ಮೋದಿ ಜೀ ರಾಜ್ಯಕ್ಕೆ ಕುಮಾರಣ್ಣ.ಇದು ಕೇವಲ ಜೆಡಿಎಸ್ ಕಾರ್ಯಕರ್ತರ ಭಾವನೆ ಅಷ್ಟೇ ಅಲ್ಲ, ರಾಜ್ಯದ ಜನರ ಭಾವನೆ. ಕುಮಾರಣ್ಣ ಸಿಎಂ ಆಗಿದ್ದಾಗ ಕೊಟ್ಟ ಕೊಡುಗೆಗಳನ್ನ ಜನ ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನಾನು ರಾಜ್ಯದ ಹಲವೆಡೆ ಪ್ರವಾಸ ಮಾಡಿದಾಗ, ಜನ ಕುಮಾರಣ್ಣ ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ ಎಂದರು. ಅಂತಹ ವ್ಯಕ್ತಿ ಸಿಎಂ ಆದರೆ ರಾಜ್ಯದಲ್ಲಿ ಸಮೃದ್ಧಿಯ ವಾತವಾರಣ ನಿರ್ಮಾಣವಾಗಲಿದೆ ಎಂದು
ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಾವು 3 ವರ್ಷ ಯಾವುದೇ ವಾಮಮಾರ್ಗದಿಂದ ಅಧಿಕಾರ ಹಿಡಿಯಲ್ಲ
ಮುಂದಿನ 2028 ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ 150ಕ್ಕೂ ಹೆಚ್ಚು ಸ್ಥಾನಗಳು ಸಿಗಲಿದೆ, ಮೈತ್ರಿ ಸರ್ಕಾರ ರಚನೆ ಮಾಡಲಿದ್ದೇವೆ. ನಮ್ಮ ನಾಯಕರು ಕುಮಾರಣ್ಣ. ಫೇಸ್ ವ್ಯಾಲ್ಯೂ ಇರುವ ನಾಯಕರು ದೇವೇಗೌಡರು, ಕುಮಾರಣ್ಣ. ಕುಮಾರಣ್ಣ ಸಿಎಂ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಅಲ್ಲ, ಇದು ಕಾರ್ಯಕರ್ತರ ಅಪೇಕ್ಷೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜೆಡಿಎಸ್ ಪಕ್ಷಕ್ಕೆ ಅಂದಿನಿಂದಲೂ ಬಲ ತುಂಬಿರುವ ಜಿಲ್ಲೆಗಳು.ನಮಗೆ ರಾಮನಗರ ಮತ್ತು ಚಿಕ್ಕಬಳ್ಳಾಪುರ ಎರಡು ಕಣ್ಣುಗಳಿದ್ದಂತೆ. ಶಿಡ್ಲಘಟ್ಟ ಶಾಸಕ ರವಿಕುಮಾರ್ ಚಿಂತಾಮಣಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಎರಡು ಆಧಾರ ಸ್ಥಂಬಗಳಿದ್ದಂತೆ ಎಂದು ಹೇಳಿದರು
ಯುವ ಸಮುದಾಯದವರು ಅಧಿಕ್ಕಾಗಿ ರಾಜಕೀಯ ಮಾಡೋದು ಬೇಡ
ತಾಲ್ಲೂಕಿನ ರೈತರು ಕೋರಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಮುನ್ನಡೆಸುವ ಒಬ್ಬ ಟಗರನ್ನು ಕೊಟ್ಟೆ ಕೊಡ್ತೆವೆ. ಯುವ ಸಮುದಾಯದ ಅಣ್ಣ ತಮ್ಮಂದಿರು ಅಧಿಕಾರ ಕ್ಕೋಸ್ಕರ ರಾಜಕೀಯ ಮಾಡೋದು ಬೇಡ ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ಕೆಲಸ ಮಾಡುವ ಉದ್ದೇಶದಿಂದ ರಾಜಕಾರಣಕ್ಕೆ ಬನ್ನಿ ಎಂದು ಯುವ ಜನತಾದಳದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆನೀಡಿದರು.
ಯುವಕರು ಹೆಚ್ಚಾಗಿ ರಾಜಕಾರಣಕ್ಕೆ ಬರಬೇಕು ಆಗ ಏನಾದ್ರು ಬದಲಾವಣೆ ಸದ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಸ್ಯೆಗಳನ್ನ ಪರಿಹರಿಸೋ ಮನಸ್ಸಿರಬೇಕು ಚುನಾವಣೆಗಳಲ್ಲಿ ಕೆಲವರಿಗೆ ಫಲ ಸಿಕ್ಕಿದೆ ಇನ್ನು ಕೆಲವರಿಗೆ ಸಿಕ್ಕಿಲ್ಲದಿರಬಹುದು ಚುನಾವಣೆಗಳಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಲ್ಲದಿದ್ದರೆ ಗೆಲ್ಲಲು ಸಾದ್ಯವಾಗುತ್ತಿರಲಿಲ್ಲ ಎಂದು ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಹೇಳಿಕೊಂಡಿರುವುದೆ ನಮ್ಮ ಪಕ್ಷಕ್ಕೆ ಶಕ್ತಿ ಇದೆ ಎನ್ನುವುದು ತೋರಿಸುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರ ಸತ್ತುಹೋಗಿದೆ. ಉಚಿತವಾಗಿ ಕೊಡುತ್ತಿರುವ ಅಕ್ಕಿ ಸರಬರಾಜಿಗೆ ಬಳಸಿದ ಲಾರಿಗಳ ಮಾಲೀಕರ ಬಾಡಿಗೆ 250 ಕೋಟಿ ಬಾಕಿ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎನ್ ಡಿ ಎ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ 151 ಸ್ಥಾನದಲ್ಲಿ ಅತ್ಯಂತ ಪ್ರಚಂಡ ಬಹುಮತ ತೆಗೆದುಕೊಳ್ಳಲು ಜೆಡಿಎಸ್ ಕಾರಣರಾಗಿದ್ದೇವೆ. ರಾಜ್ಯ ಪ್ರವಾಸ ಮಾಡುತ್ತಿರುವುದು ಮುಂದಿನ ಚುನಾವಣೆ ಹೇಗೆ ನಡೆಸಬೇಕೆಂಬ ಮಾಹಿತಿ ನಿಮಗೆ ನೀಡುತ್ತೇವೆ. ಪಕ್ಷ 50 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ಗುರಿ ಇಟ್ಟು ಹೋಗುತ್ತಿದ್ದೇನೆ ನಿಮ್ಮ ಸಹಕಾರ ಇರಲಿ ಎಂದು ಹೇಳಿದರು.
ಕಾರ್ಯಕರ್ತರು ಮೂವತ್ತು ದಿನ, ಒಂದು ದಿನಕ್ಕೆ ಮೂರು ಗಂಟೆ ಕೆಲಸ ಮಾಡಿ ಒಬ್ಬರು ಹತ್ತು ಜನರಿಂದ ಮಿಸ್ಡ್ ಕಾಲ್ ಕೊಡಿಸಿ ಅವರಿಗೆ ಪಕ್ಷಕ್ಕೆ ಬೆಂಬಲಿಸುವಂತೆ ವಿಶ್ವಾಸ ಮೂಡಿಸಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಮನವಿ ಮಾಡಿದರು.
ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಣ್ಣನವರು ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ “2028” ಕ್ಕೆ ಮತ್ತೊಮ್ಮೆ ಕುಮಾರಣ್ಣನವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲು ನಾವೆಲ್ಲರೂ ಹಗಲಿರುಳು ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಅವರನ್ನು ತಿಪ್ಪೆನಹಳ್ಳಿಯಿಂದ ಕನಜೇನಹಳ್ಳಿ. ನಗರದ ಅಂಕನಗೊಂದಿ, ಎಪಿಎಂಸಿ, ಎಂ ಜಿ ರಸ್ತೆ, ಬಿ ಆರ್ ಅಂಬೇಡ್ಕರ್ ವೃತ್ತ, ಬಿಬಿ ರಸ್ತೆ ಮೂಲಕವಾಗಿ ಸಾಗಿತು ಇದೇ ವೇಳೆ ಹೂವಿನ ಮಳೆ ಸುರಿಸಿ ಸುಮಾರು ಐದು ಕಿಲೋಮೀಟರ್ ನಷ್ಟು ಬೈಕ್ ರ್ಯಾಲಿ ಮೂಲಕ ಹಾಗೂ ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ಕಾರ್ಯಕರ್ತರು ಅವರನ್ನು ಸ್ವಾಗತ ಮಾಡಿದರು.