ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಸುಮಾರು 40 ವರ್ಷ ಹಳೆಯ ಸೇತುವೆ ಕುಸಿದು (Bridge Collapse) ನಾಲ್ಕು ವಾಹನಗಳು ಮಹಿಸಾಗರ್ ನದಿಗೆ ಉರುಳಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನಂದ್ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಪದ್ರಾ ತಾಲ್ಲೂಕಿನ ಗಂಭೀರಾ ಸೇತುವೆಯ ಒಂದು ಸ್ಲ್ಯಾಬ್ ಬೆಳಗಿನ ಸಮಯದಲ್ಲಿ ಕುಸಿದು ಬಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಕನಿಷ್ಠ ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ONE MORE EXAMPLE OF MODI'S DEVELOPMENT IN INDIA⚠️☠️
— Barbarik (@Sunny_000S) July 9, 2025
🗓9.07.2025
The Gambhira Bridge on Mahisagar River connecting Vadodara & Anand collapses in Padra.
IS THIS MODI'S NEW DIGITAL INDIA AN INSPIRATION TO WORLD?😱#bridgecollapse #Gujarat #Vadodara #GambhiraBridge #MahisagarRiver pic.twitter.com/DCBVXsrsk5
ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿ ಕಾರ್ಯಕ್ಕಾಗಿ ಮಾಡಿದ ಮನವಿಗಳನ್ನು ಅಧಿಕಾರಿಗಳು ನಿರ್ಲಕ್ಷ್ಯಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
Just 2 months ago a reporter did point out the problem with the Bridge that collapsed today killing 8 people instantly. This is not Bihar but Gujarat 💔 pic.twitter.com/9qWn0cybx3
— SUDHIR (@seriousfunnyguy) July 9, 2025
ಅಗ್ನಿಶಾಮಕ ದಳದ ತಂಡವು ಅಪಘಾತದ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ದೋಣಿಗಳು ಮತ್ತು ಡೈವರ್‌ಗಳೊಂದಿಗೆ ಸಕ್ರಿಯವಾಗಿದೆ, ಇದರೊಂದಿಗೆ ಎನ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
પાદરા પાસે મુજપુર ગંભીરા બ્રિજ વહેલી સવારે અચાનક વચ્ચેથી તૂટી ગયો, અનેક વાહનો નદીમાં પડ્યા વાહનચાલકોની શોધખોળ શરૂ કરાઈ. સ્ટેટ R&B વિભાગના અધિકારીઓની લાલીયાવાડી, બેદરકારીના કારણે મોટી દુર્ઘટના સર્જાઈ #viral #reels #video #vadodara #trending #gujarat #bridge #collapse #government pic.twitter.com/A4GLJYWpxz
— RAVI MACHHI (@ravinvarma) July 9, 2025
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದು, ಮೃತರಿಗೆ ಸಂತಾಪ ಸೂಚಿಸಿದೆ. ಅಲ್ಲದೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದೆ.
Gujarat Model
— তন্ময় l T͞anmoy l (@tanmoyofc) September 25, 2023
Bridge collapsed in Surendranagar, #Gujarat. It was repaired few days before.#GujaratModel #RameshBidhuri #MannKiBaat pic.twitter.com/7aDPlucyzG