ದೊಡ್ಡಬಳ್ಳಾಪುರ: ಆಷಾಢಮಾಸ ಕೃಷ್ಣ ಪಕ್ಷ ನವಮಿ ಜುಲೈ.19ರ ಶನಿವಾರದಂದು ತಾಲೂಕಿನ ಉಜ್ಜನಿ ಹೊಸಹಳ್ಳಿಯ ಶ್ರೀ ಲಕ್ಷ್ಮೀನಾರಸಿಂಹಸ್ವಾಮಿ ದೇವಾಲಯದಲ್ಲಿ “ಶ್ರೀನಿವಾಸ ಕಲ್ಯಾಣೋತ್ಸವ” (Srinivasa Kalyanatsava) ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮರ್ಥ ಸೇವಾ ಟ್ರಸ್ಟ್ ವತಿಯಿಂದ
ಜುಲೈ 19 ಬೆಳಿಗ್ಗೆ 8.30ಕ್ಕೆ ಶ್ರೀ ಲಕ್ಷ್ಮೀನಾರಸಿಂಹಸ್ವಾಮಿ ದೇವಾಲಯದಲ್ಲಿ “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ” ಪೂಜಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ವಿಶೇಷ ಅಲಂಕಾರ, ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್ ತಿಳಿಸಿದ್ದಾರೆ.