ಮಡಿಕೇರಿ: 2023 ನೇ ಸಾಲಿನ ಪ್ರವಾಸಿಗರ ಅಂಕಿ ಅಂಶ: 43,69,507, 2024 ನೇ ಸಾಲಿನ ಪ್ರವಾಸಿಗರ ಅಂಕಿ ಅಂಶ :45,72,790, 2025 ನೇ ಸಾಲಿನ ಜೂನ್ ಅಂತ್ಯಕ್ಕೆ 10.50 ಲಕ್ಷ ಪ್ರವಾಸಿಗರು ಕೊಡಗು (Kodagu) ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ರಡಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ 778 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಯ ಈ ಕೆಳಕಂಡ 23 ಪ್ರವಾಸಿ ತಾಣ ಗುರುತಿಸಿದೆ ಎಂದು ರಾಜರ ಗದ್ದುಗೆ, ಮಡಿಕೇರಿ ಕೋಟೆ, ನಾಲ್ಕು ನಾಡು ಅರಮನೆ, ಅಬ್ಬಿ ಜಲಪಾತ, ಮಾಂದಲ್ ಪಟ್ಟಿ, ರಾಜಾಸೀಟು, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಮಲ್ಲಳ್ಳಿ ಜಲಪಾತ, ನಿಶಾನಿಮೊಟ್ಟೆ, ಚೇಲಾವರ ಜಲಪಾತ, ಇರ್ಪು ಜಲಪಾತ, ದುಬಾರೆ, ಚೆಟ್ಟಳ್ಳಿ ಫಾರ್ಮ್ ಹೊನ್ನಮ್ಮನ ಕೆರೆ, ಮಕ್ಕಳಗುಡಿ ಬೆಟ್ಟ, ಚಿಕ್ಕಿಹೊಳೆ, ಕುಂದಬೆಟ್ಟ, ಬರ್ಪುಹೊಳೆ ರ್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ಮ್ಯೂಸಿಯಂ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ.
ತಲಕಾವೇರಿ-ಭಾಗಮಂಡಲ ದೇವಾಲಯಗಳನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟು ಧಾರ್ಮಿಕ ಕ್ಷೇತ್ರ (Spiritual) ಗಳ ಪಟ್ಟಿಗೆ ಸೇರಿಸುವಂತೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಲ್ಲಿ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ರೂ.2813.9 ಲಕ್ಷಗಳ ಅನುದಾನದಲ್ಲಿ ಬಂಡವಾಳ ವೆಚ್ಚಗಳಲ್ಲಿ 8 ಹಾಗೂ ಕೆಟಿವಿಜಿ ಯಲ್ಲಿ 6 ಒಟ್ಟು 14 ವಿವಿಧ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
‘ಒಂದು ಜಿಲ್ಲೆ ಒಂದು ತಾಣ’ ಅಡಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪಿಪಿಪಿ ಮಾದರಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲೆಯ ಮಾಂದಲ್‍ಪಟ್ಟಿ ಪ್ರವಾಸಿ ತಾಣವನ್ನು ಸರ್ಕಾರದಿಂದ ಆಯ್ಕೆ ಮಾಡಲಾಗಿದೆ.
ಅದರಂತೆ ಜಂಕ್ಷನ್‍ನಲ್ಲಿ 50 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯತ್‍ಯಿಂದ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಗಾಳಿಬೀಡು ಗ್ರಾಮ ಪಂಚಾಯತ್ ಒಪ್ಪಿಗೆ ಸೂಚಿಸಿರುತ್ತಾರೆ.
ಮಡಿಕೇರಿ ತಾಲ್ಲೂಕಿನ ಮಾಂದಲ್‍ಪಟ್ಟಿ ಪ್ರದೇಶವು ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಡುವುದರಿಂದ ಈ ಜಾಗದಲ್ಲಿ ಅರಣ್ಯ ಇಲಾಖೆಯಿಂದ ರಸ್ತೆ ದುರಸ್ತಿ ಹಾಗೂ ಇತರೆ ಕಾಮಗಾರಿ ಕಲ್ಪಿಸಿ ಸಹಕಾರ ನೀಡುವಂತೆ ಕೋರಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
2025-26 ನೇ ಸಾಲಿನ ಮುಖ್ಯಮಂತ್ರಿಯವರ ಆಯವ್ಯಯ ಘೋಷಣೆಯ ಕಂಡಿಕೆ ಸಂಖ್ಯೆ: 384 ರಲ್ಲಿ ಕೊಡಗು ಜಿಲ್ಲೆಯ ಕೊಡವ ಹೆರಿಟೇಜ್ ಕೇಂದ್ರ ಅಭಿವೃದ್ಧಿ ಪಡಿಸುವ ಸಂಬಂಧ ಅಭಿವೃದ್ಧಿಪಡಿಸಬಹುದಾದ ಮೂಲ ಸೌಕರ್ಯಗಳ ರೂ.5 ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೋರಲಾಗಿದೆ ಎಂದು ವಿವರಿಸಿದ್ದಾರೆ.
ಅಬ್ಬೀ ಜಲಪಾತ ಪ್ರವಾಸಿ ತಾಣದಲ್ಲಿ ದುಸ್ಥಿತಿಯಲ್ಲಿರುವ ವಾಚ್ ಟಾವರ್ ದುರಸ್ತಿ ಹಾಗೂ ಅಪಾಯಗಾರಿ ತೂಗು ಸೇತುವೆಯನ್ನು ತೆರವುಗೊಳಿಸುವ ಬಗ್ಗೆ, ಮಡಿಕೇರಿ ನಗರದಲ್ಲಿರುವ ಕೋಟೆಗೆ ಸೌಂಡ್ಸ್ ಅಂಡ್ ಲೈಟ್ ಅಳವಡಿಸುವ ಪ್ರಸ್ತಾವನೆ ಬಗ್ಗೆ, ಮಡಿಕೇರಿ ತಾಲ್ಲೂಕಿನ ಗದ್ದುಗೆ ಪ್ರವಾಸಿ ತಾಣದಲ್ಲಿ ಉದ್ಯಾನವನ್ನು ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿ ಪಡಿಸಲು ರೂ.99.45 ಲಕ್ಷಗಳ ಪ್ರಸ್ತಾವನೆ ಸಿದ್ಧಪಡಿಸಿರುವ ಬಗ್ಗೆ, ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಗೆ 2023-24ನೇ ಸಾಲಿನ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿಯಲ್ಲಿ ರೂ.1 ಕೋಟಿಗಳ ಅನುದಾನದಲ್ಲಿ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೆಆರ್‍ಐಡಿಎಲ್ ಸಂಸ್ಥೆಯ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.
ಪೊನ್ನಂಪೇಟೆ ತಾಲ್ಲೂಕು ಇರ್ಪು ಫಾಲ್ಸ್ ಅಭಿವೃದ್ಧಿ ಕಾಮಗಾರಿ ರೂ.25 ಲಕ್ಷ, ವಿರಾಜಪೇಟೆ ತಾಲ್ಲೂಕು ಶ್ರೀ ಮಲೆತೆರಿಕೆ ಈಶ್ವರ ಟೆಂಪಲ್ ಅಭಿವೃದ್ಧಿ ಕಾಮಗಾರಿ ರೂ. 25 ಲಕ್ಷ, ವಿರಾಜಪೇಟೆ ತಾಲ್ಲೂಕು ಪೆರಂಬಾಡಿ ಕೆರೆ ಅಭಿವೃದ್ಧಿ ಕಾಮಗಾರಿ 25 ಲಕ್ಷ ಮತ್ತು ಪೊನ್ನಂಪೇಟೆ ತಾಲ್ಲೂಕು ಬರ್ಪುಹೊಳೆ ರಿವರ್ ಸ್ಕಿನಿಕ್ ಸ್ಪಾಟ್ ಮತ್ತು ರಿವರ್ ರ್ಯಾಫ್ರ್ಟಿಂಗ್ ಅಭಿವೃದ್ಧಿ ಕಾಮಗಾರಿ ರೂ.25 ಲಕ್ಷ ಒಟ್ಟು 100 ಲಕ್ಷ, ಪೊನ್ನಂಪೇಟೆ ತಾಲ್ಲೂಕಿನ ಗೌರಿ ಕೆರೆಯನ್ನು ಅಭಿವೃದ್ಧಿ ಪಡಿಸುವ ಸಂಬಂಧ ರೂ.870.20 ಲಕ್ಷಗಳ ಅಂದಾಜು ಪಟ್ಟಿಯನ್ನು ಸಿದ್ದಪಡಿಸಿ ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಮಾನ್ಯ ಆಯುಕ್ತರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ರವರನ್ನು ಕೋರಿರುವ ಬಗ್ಗೆ.
ಕೊಡಗು ಜಿಲ್ಲೆ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಅತ್ಯಗತ್ಯವಾಗಿದ್ದು, 2025-26ನೇ ಸಾಲಿನ ಕ್ರೀಯಾ ಯೋಜನೆಯಡಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಈ ಕೆಳಕಂಡ ಕಾಮಗಾರಿಗಳ ಪ್ರಸ್ತಾವನೆ ಪ್ರವಾಸೋದ್ಯಮ ಕೇಂದ್ರ ಕಚೇರಿಗೆ ಸಲ್ಲಿಸಿರುವ ಬಗ್ಗೆ.
ಮಡಿಕೇರಿ ವಿಧಾನಸಭಾ ಕ್ಷೇತ್ರ ಮಾಂದಲ್‍ಪಟ್ಟಿ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯ 500 ಲಕ್ಷ, ಮಕ್ಕಳ ಗುಡಿ ಬೆಟ್ಟದಲ್ಲಿ ಮೂಲಭೂತ ಸೌಕರ್ಯ ರೂ.100 ಲಕ್ಷ, ಯಡದಂಟೆ ಫಾಲ್ಸ್ ಮತ್ತು ಗವಿ ಬೆಟ್ಟ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ರೂ.100 ಲಕ್ಷ, ಕುಮಾರಧಾರ ಸ್ಟೀಲ್ ವಾಟರ್ ರ್ಯಾಫ್ಟಿಂಗ್ ಮತ್ತು ಕಾಯಾಕಿಂಗ್ 100 ಲಕ್ಷ, ಸೂಲರ್ಬಿ ಜಲಪಾತದಲ್ಲಿ ಮೂಲಭೂತ ಸೌಕರ್ಯ 100 ಲಕ್ಷ, ಕೋಟೆ ಬೆಟ್ಟ ಮತ್ತು ಗರ್ವಾಲೆ ಜಲಪಾತದಲ್ಲಿ ಮೂಲಭೂತ ಸೌಕರ್ಯ ರೂ.500 ಲಕ್ಷ, ದೊಡ್ಡಕಲ್ಲು ಬೆಟ್ಟದಲ್ಲಿ ಪ್ರವಾಸಿ ಮೂಲಭೂತ ಸೌಕರ್ಯ ರೂ.150 ಲಕ್ಷ, ರಾಜಾಸೀಟು ಪ್ರವಾಸಿ ತಾಣವನ್ನು ಸಂಪರ್ಕಿಸುವ ರಸ್ತೆಯಾದ ಕುಂದುರುಮೊಟ್ಟೆ ದೇವಸ್ಥಾನದಿಂದ ಗ್ರಾಹಕ ನ್ಯಾಯಾಲಯದವರೆಗೆ ಸಿಸಿ/ಡಾಂಬರ್ ರಸ್ತೆಯನ್ನು ಅಳವಡಿಸುವುದು ರೂ.110 ಲಕ್ಷ.
ಕೊಡವ ಹೆರಿಟೇಜ್ ಸೆಂಟರ್‍ಗೆ ಅತೀ ಅವಶ್ಯವಿರುವ ಮೂಲಭೂತ ಸೌಕರ್ಯವನ್ನು ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಾಗುವಂತೆ ಕಾಮಗಾರಿ ಪೂರ್ಣಗೊಳಿಸಲು ಅವಶ್ಯವಿರುವ ಕಾಮಗಾರಿಗೆ ರೂ.300 ಲಕ್ಷ, ಹೊನ್ನಮ್ಮನ ಕೆರೆ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ರೂ.100 ಲಕ್ಷ, ಹಾರಂಗಿ ವೃಕ್ಷೋದ್ಯನವನ ಹಾಗೂ ಆನೆ ಶಿಬಿರ ಮೂಲಭೂತ ಸೌಕರ್ಯ ಅಭಿವೃದ್ಧಿ ರೂ.100 ಲಕ್ಷ.
ಸೋಮವಾರಪೇಟೆ ತಾಲ್ಲೂಕು, ಕುಸುಬೂರು ಗ್ರಾಮದ ಬೇಳೂರು ಕ್ಲಬ್ ಗಾಲ್ಫ್ ಕೋರ್ಸ್ ಸ.ನಂ 143/2 ರ 7.12 ಎಕರೆ ಜಮೀನಿನಲ್ಲಿ Way Side Amenities ಗಳನ್ನು ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಿಸುವುದು ರೂ.340 ಲಕ್ಷ, ಒಟ್ಟು ರೂ.25 ಕೋಟಿ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚೇಲಾವರ ಪಾರ್ಕಿಂಗ್ ಮತ್ತು ಬ್ರಿಡ್ಜ್ ಅಭಿವೃದ್ಧಿ ರೂ.1 ಲಕ್ಷ, ವೇಸೈಡ್ ಅಮೆಂಟೀಸ್ ಮತ್ತಿಗೋಡು ಎಲಿಪೆಂಟ್ ಕ್ಯಾಂಪ್ ರೂ.2 ಲಕ್ಷ, ಕುಂದಬೆಟ್ಟ ಅಭಿವೃದ್ಧಿಗೆ ರೂ.3 ಲಕ್ಷ, ಇರ್ಪು ಪಾಲ್ಸ್ ಬಳಿ ಹೈಟೆಕ್ ಟಾಯ್‍ಲೆಟ್ ರೂ.2 ಲಕ್ಷ, ಕಬ್ಬೆ ಬೆಟ್ಟದ ಅಭಿವೃದ್ಧಿಗೆ ರೂ.1.50 ಲಕ್ಷ ಒಟ್ಟು 10 ಕೋಟಿ.
ಹೊನ್ನಮ್ಮ ಕೆರೆ: ಸೋಮವಾರಪೇಟೆ ತಾಲ್ಲೂಕಿನ ಹೊನ್ನಮ್ಮನ ಕೆರೆಯು ಪ್ರಮುಖ ಪ್ರವಾಸಿ ತಾಣವಾಗಿದ್ದು, ಈ ಪ್ರವಾಸಿ ತಾಣ ಪ್ರದೇಶದಲ್ಲಿ ಪಕ್ಕದಲ್ಲಿ ಗವಿಬೆಟ್ಟ, ಗುಹೆ ಇದು ಪ್ರವಾಸಿಗರನ್ನು ಆಕರ್ಷಿಸಲು ಹೊನ್ನಮ್ಮ ಕೆರೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಲಸಾಹಸ ಕ್ರೀಡೆಗಳಾದ ರ್ಯಾಫ್ಟಿಂಗ್, ಕಯಾಕಿಂಗ್, ಕನೋಯಿಂಗ್, ವಿಂಡ್ ಸರ್ಫಿಂಗ್, ಜೆಟ್‍ಸ್ಕೀಯಿಂಗ್, ವಾಟರ್ ಜಾರ್ಬಿಂಗ್‍ಗಳನ್ನು ನಡೆಸಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ 2 ವರ್ಷಗಳ ಅವಧಿಗೆ ಟೆಂಡರ್ ಕರೆಯಲು ಅನುಮತಿ ಕೋರಿರುವ ಬಗ್ಗೆ ಮಾಹಿತಿ ನೀಡಿದರು.
ಈ ಪ್ರವಾಸಿ ತಾಣದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 4 ಸೆಂಟ್ಸ್ ಜಾಗವಿದ್ದು, ಈ ಜಾಗದಲ್ಲಿ ಮೂಲಭೂತ ಸೌಕರ್ಯ ಹಾಗೂ ಅಡುಗೆ ಕೋಣೆಗಳನ್ನು ಸಿದ್ಧಪಡಿಸಲು ನಿರ್ಮಿತಿ ಕೇಂದ್ರ ಮೂಲಕ ಅಂದಾಜು ಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ. ಈ ಗ್ರಾಮಸ್ಥರು ಸ್ಥಳದ ಅಭಿವೃದ್ಧಿಗಾಗಿ ಊರಿನ ಜಾಗ ನೀಡುವುದಾಗಿ ತಿಳಿಸಿರುತ್ತಾರೆ.
ಕಾಯಾಕಿಂಗ್: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ ಸಾಹಸ ಜಲ ಕ್ರೀಡೆಯಲ್ಲಿ ಒಂದಾದ ಕಾಯಾಕಿಂಗ್ ಜಲ ಕ್ರೀಡೆಯನ್ನು ನಡೆಸಲು ಅವಕಾಶವಿದ್ದು, ರಾಜ್ಯದ ಪ್ರಮುಖ ಸ್ಥಳಗಳಾದ ಮುಲ್ಕಿ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಈಗಾಗಲೇ ನಡೆಯುತ್ತಿದೆ.
ಕೊಡಗು ಜಿಲ್ಲೆಯಲ್ಲಿ ವಿವಿಧ ಕಡೆಯಲ್ಲಿ ಕಾಯಾಕಿಂಗ್ ನಡೆಸಲು 13 ಅರ್ಜಿದಾರರ ಮನವಿಗಳು ಸ್ವೀಕೃತವಾಗಿದ್ದು, GETHNA ಸಂಸ್ಥೆಯಿಂದ ಸ್ಥಳವನ್ನು ಪರಿಶೀಲಿಸಿ Feasibility Test/ Suitable test ವರದಿಯನ್ನು ಪಡೆಯಲು ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಮುಖಾಂತರ GETHNA ಸಂಸ್ಥೆಗೆ ಕೋರಲಾಗಿದೆ.
ನೂತನ ಪ್ರವಾಸೋದ್ಯಮ ನೀತಿ 2024-29 ರಡಿಯಲ್ಲಿ ಕೃಷಿ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಫಾರ್ಮ್ ಸ್ಟೇ, ಪಾರಂಪರಿಕ ಹೋಟೆಲ್, ಪಾರಂಪರಿಕ ಪ್ರವಾಸೋದ್ಯಮ ಯೋಜನೆ, ಹೋಟೆಲ್ ಬಜೆಟ್, ಹೋಟೆಲ್ ಪ್ರಿಮಿಯಂ, ರಸ್ತೆ ಬದಿ ಸೌಲಭ್ಯಗಳ ಹಾಗೂ ಇತರೆ ಯೋಜನೆ ಬಗ್ಗೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 2300 ಹೋಂ-ಸ್ಟೇಗಳು ಆನ್‍ಲೈನ್‍ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ ಸುಮಾರು 150 ಹೋಟೆಲ್/ ರೆಸಾರ್ಟ್‍ಗಳು ಕಾರ್ಯ ನಿರ್ವಹಿಸುತ್ತಿದ್ದು, 53 ಹೋಟೆಲ್/ ರೆಸ್ಟೋರೆಂಟ್/ ರೆಸಾರ್ಟ್‍ಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ.
ಮುಖ್ಯಮಂತ್ರಿಯವರು, 2024-25 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 373 ರಲ್ಲಿ ‘ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಹಿನ್ನೀರಿನಲ್ಲಿ ಮತ್ತು ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು’ ಎಂಬುದಾಗಿ ಘೋಷಿಸಿರುತ್ತಾರೆ.
ಅದರಂತೆ ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳನ್ನು ಮತ್ತು ಜಲಸಾಹಸ ಪ್ರವಾಸೋದ್ಯಮವನ್ನು ನಡೆಸಲು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜೆಎಲ್‍ಆರ್) ನಿಗಮದ ವತಿಯಿಂದ ಪರವಾನಿಗೆ ನೀಡಿ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿರುತ್ತದೆ.
ಕುಶಾಲನಗರ ತಾಲ್ಲೂಕು ದುಬಾರೆ ಹಾಗೂ ಪೊನ್ನಂಪೇಟೆ ತಾಲ್ಲೂಕು ಬರ್ಪುಹೊಳೆ ಪ್ರವಾಸಿ ತಾಣಗಳಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸಲು ಪರವಾನಿಗೆ ನೀಡಲಾಗಿರುತ್ತದೆ.
ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಕನ್ನಡ ಹಾಗೂ ಆಂಗ್ಲ ಭಾಷೆಯ ಮಡಿಕೆಗಳು/ಬೋಚರ್ಸ್ ಗಳನ್ನು ತಯಾರಿಸಿರುವ ಬಗ್ಗೆ, ಜಿಲ್ಲೆಯ ನೊಂದಾಯಿತ ಹೋಂ-ಸ್ಟೇಗಳಿಗೆ ನೀಡಲು Travel for Life-Actions for Tourists ಎಂಬ ಪೋಸ್ಟರ್ಸ್‍ಗಳನ್ನು ತಯಾರಿಸಿರುವ ಬಗ್ಗೆ, ಪ್ರವಾಸೋದ್ಯಮ ಉತ್ತೇಜನಕ್ಕಾಗಿ 2025 ನೇ ಸಾಲಿನ 1500 ಕ್ಯಾಲೆಂಡರ್ ಮುದ್ರಿಸಿರುವ ಬಗ್ಗೆ, ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುವ ಸಲುವಾಗಿ ಸಾಮಾಜಿಕ ಮಾಧ್ಯಮ ಮತ್ತು ಪ್ರಚಾರ ಕಾರ್ಯದ ಬಗ್ಗೆ, ಕೊಡಗು ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಕಾಫಿ ಟೇಬಲ್ ಬುಕ್ ತಯಾರಿಸಲು ವ್ಯವಸ್ಥಾಪಕ ನಿರ್ದೇಶಕರು, ಎಂ.ಸಿ.ಎ ಬೆಂಗಳೂರು ರವರಿಗೆ ರೂ.24,48,500 ಕಾರ್ಯದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಪುಸ್ತಕವು ಮುಕ್ತಾಯ ಹಂತದಲ್ಲಿರುವ ಬಗ್ಗೆ, ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುವ ಸಲುವಾಗಿ ಸಂಪೂರ್ಣ ಮಾಹಿತಿ ಒಳಗೊಂಡ ವೆಬ್‍ಸೈಟ್‍ನ್ನು ಅಭಿವೃದ್ಧಿಪಡಿಸಿ ಇದೇ ಜನವರಿ 31 ರಂದು ಮುಖ್ಯಮಂತ್ರಿರವರು ಲೋಕಾರ್ಪಣೆ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಹೋರ್ಡಿಂಗ್-ಸೈನೇಜ್ ಮರುವಿನ್ಯಾಸ ಹಾಗೂ ಅವಶ್ಯವಿರುವ ಪ್ರವಾಸಿ ತಾಣಗಳ ನಾಮಫಲಕಗಳನ್ನು ಅಳವಡಿಸುವ ಬಗ್ಗೆ, ಕೊಡಗು ಜಿಲ್ಲೆಗೆ ಪ್ರಸಕ್ತ 45 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಅವರ ಮುಂದಿನ ಪ್ರವಾಸಿ ತಾಣವನ್ನು ಆಯ್ಕೆ ಮಾಡಿಕೊಳ್ಳಲು ಸಹಕರಿಯಾಗುವಂತೆ ಜಿಲ್ಲೆಯ ದುಬಾರೆ, ರಾಜಾಸೀಟು, ಹಾರಂಗಿ, ನಿಸರ್ಗಧಾಮ ಹಾಗೂ ಅಬ್ಬೀ ಜಲಪಾತ ಪ್ರವಾಸಿ ತಾಣಗಳಲ್ಲಿ ಅವರ ಮುಂದಿನ ಪ್ರವಾಸಿ ತಾಣವನ್ನು ಸಂಪರ್ಕಿಸಲು ಎಲ್ಲಿಗೆ ಹೋಗಲು ಬಯಸುವಿರಿ ಎಂಬ ಬೋರ್ಡ್‍ಗಳನ್ನು ಮುದ್ರಿಸುವ ಬಗ್ಗೆ
ಕೊಡಗು ಜಿಲ್ಲೆಯ ಕಲೆ, ಸಂಸ್ಕೃತಿ, ಪ್ರವಾಸಿ ಸ್ಥಳ, ಧಾರ್ಮಿಕ ಸ್ಥಳ, ಬೆಳೆ ಇತರೆ ಎಲ್ಲಾ ವಿಷಯಗಳ ಸಮಗ್ರ ಮಾಹಿತಿಯನ್ನೊಳಗೊಂಡ 15 ನಿಮಿಷದ ವಿಡಿಯೋ ಮತ್ತು 1 ನಿಮಿಷದ 6 Theme based videos ಹಾಗೂ 30 ಸೆಕೆಂಡುಗಳ 10 ರೀಲ್ಸ್‍ಗಳನ್ನು ತಯಾರಿಸುವ ಬಗ್ಗೆ
ಪ್ರವಾಸೋದ್ಯಮ ಇಲಾಖೆಯು ಕೊಡಗು ಜಿಲ್ಲೆಯ ಆಕಾಶವಾಣಿಯೊಂದಿಗೆ ಒಪ್ಪಂದ ಮಾಡಿಕೊಂಡು ದಿನಾಂಕ:11-07-2025 ರಿಂದ ದಿನಾಂಕ:09-08-2025ರವರೆಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಪ್ರವಾಸಿಗರ ಜಾಗೃತಿ ಬಗ್ಗೆ ರೇಡಿಯೋ ಜಿಂಗಲ್ಸ್ ಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಮಕ್ಕಳ ಗುಡಿ ಬೆಟ್ಟ: ಸೋಮವಾರಪೇಟೆ ತಾಲ್ಲೂಕಿನ ಬಿಳಿಗೇರಿ ಗ್ರಾಮ ಮಕ್ಕಳಗುಡಿ ಬೆಟ್ಟ ಪ್ರವಾಸಿ ತಾಣವನ್ನು ಸಿ ಬರ್ಡ್ ರೆಸಾರ್ಟ್ ರವರು ತಮ್ಮ ಸಿಎಸ್‍ಆರ್ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಮುಂದೆ ಬಂದಿದ್ದು, ಸದರಿಯವರಿಗೆ ಅನುಮತಿ ನೀಡಲು ಹಾಗೂ ಈ ಸಂಬಂಧ ಸರ್ವೆ ಕಾರ್ಯ ಕೈಗೊಂಡು 3 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಕಾಯ್ದಿರಿಸುವ ಬಗ್ಗೆ. ಮಲ್ಲಳ್ಳಿ ಜಲಪಾತದ ಬಳೀ ರೋಪ್ ವೇಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆದಿರುವ ಬಗ್ಗೆ
ಸೋಮವಾರಪೇಟೆ ತಾಲ್ಲೂಕು ಕುಸೂಬೂರು ಗ್ರಾಮದ ಸರ್ವೆ ನಂ. 143/2 ರ (ಬೇಲೂರು ಗಾಲ್ಪ್) 7.12 ಎಕರೆ ಜಮೀನ ಗಡಿ ಭಾಗಗಳನ್ನು ಗುರುತು ಮಾಡಲಾಗಿದ್ದು, ಈ ಪ್ರದೇಶದಲ್ಲಿ Way Side Amenities and 4 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್ ನಿರ್ಮಿಸುವಂತೆ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ.
ಪ್ರವಾಸಿ ಮಿತ್ರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿರಿಗೆ, ಸೂಕ್ತ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ದೃಷ್ಟಿಯಿಂದ ವಿವಿಧ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸಲು ಪ್ರವಾಸಿಗರ ಸುರಕ್ಷತೆಗಾಗಿ 9 ಪ್ರವಾಸಿ ಮಿತ್ರರುಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ Zero waste Travel/ ಶೂನ್ಯ ತ್ಯಾಜ್ಯ ಪ್ರವಾಸವನ್ನು ಜಿಲ್ಲಾಧಿಕಾರಿಗಳು ಜಾರಿ ಗೊಳಿಸಿದ್ದು, ಅದರಂತೆ ಜಿಲ್ಲೆಯಲ್ಲಿರುವ ಪ್ರವಾಸಿ ಟ್ಯಾಕ್ಸಿಗಳಲ್ಲಿ ವಾಹನದಿಂದ ಹೊರಗೆ Plastic ತ್ಯಾಜ್ಯವನ್ನು ಬಿಸಾಡದಂತೆ ತಡೆಯಲು ಬ್ಯಾಗ್‍ಗಳನ್ನು ವಿತರಿಸುವುದು ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಸುದೀರ್ಘವಾಗಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ವಿವರಿಸಿದರು. ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು.
ಫೋಟೋ ಕೃಪೆ: Chammatira Praveen Uthappa