ಮೇ.17 ರವರೆಗೆ ನಿಷೇಧಾಜ್ಞೆ ಜಾರಿ – ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ

ದೊಡ್ಡಬಳ್ಳಾಪುರ : ಕರೊನಾ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಮೇ 03 ರ ಮಧ್ಯರಾತ್ರಿ 12.00 ಗಂಟೆಯಿಂದ ಮೇ.17 ರ ಮಧ್ಯರಾತ್ರಿ 12.00 ಗಂಟೆಯವರೆಗೆ ಕೇಂದ್ರ ಗೃಹ ಮಂತ್ರಾಲಯದಿಂದ ಹೊರಡಿಸಿರುವ ಆದೇಶದನ್ವಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 144(1) ರಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರವೀಂದ್ರ ಪಿ.ಎನ್. ಅವರು ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಎಲ್ಲಾ ಜೋನ್‌ಗಳಲ್ಲಿ, ಎಲ್ಲಾ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಸಾರ್ವಜನಿಕ ವೈಮಾನಿಕ ಸೇವೆ, ವೈದ್ಯಕೀಯ ಸೇವೆ ಹಾಗೂ ಎಂ.ಹೆಚ್.ಎ ರಿಂದ ಅನುಮತಿಸಲಾದ ಉದ್ದೇಶಗಳಿಗೆ ಹೊರತುಪಡಿಸಿ, ರೈಲುಗಳ ಮುಖಾಂತರ ಸಾರ್ವಜನಿಕ ಸಂಚಾರ, ಎಂ.ಹೆಚ್.ಎ ರವರಿಂದ ಅನುಮತಿಸಲಾದ ಉದ್ದೇಶಗಳಿಗೆ ಹೊರತುಪಡಿಸಿ, ಅಂತರ್‌ರಾಜ್ಯ ಬಸ್ಸು ಸೇವೆ, ಎಂ.ಹೆಚ್.ಎ ರವರಿಂದ ಅನುಮತಿಸಲಾದ ಉದ್ದೇಶಗಳಿಗೆ ಹೊರತುಪಡಿಸಿ, ಮೆಟ್ರೋ ರೈಲು ಸೇವೆ, ಎಂ.ಹೆಚ್.ಎ ರವರಿಂದ ಅನುಮತಿಸಲಾದ ಉದ್ದೇಶಗಳಿಗೆ ಹೊರತುಪಡಿಸಿ, ಸಾರ್ವಜನಿಕರ ಅಂತರ್‌ರಾಜ್ಯ ಓಡಾಟಗಳು, ವೈದ್ಯಕೀಯ ಹಾಗೂ ಎಂ.ಹೆಚ್.ಎ ರವರಿಂದ ಅನುಮತಿಸಲಾದ ಉದ್ದೇಶಗಳಿಗೆ ಹೊರತುಪಡಿಸಿ, ಎಲ್ಲಾ ಶಾಲಾ, ಕಾಲೇಜು, ಶೈಕ್ಷಣಿಕ/ ತರಬೇತಿ / ತರಬೇತಿ ಸಂಸ್ಥೆಗಳು ಇತರೆ, ಆದರೆ ಆನ್‌ಲೈನ್ / ಅಂತರದ ಕಲಿಕೆಗಳಿಗೆ ಹೊರತುಪಡಿಸಿ, ಎಲ್ಲಾ ಸರ್ಕಾರೇತರ ಆತಿಥ್ಯ ಸೇವೆಗಳು, ಕ್ವಾರಂಟೀನ್ ಸೌಲಭ್ಯಗಳನ್ನು ಹೊರತುಪಡಿಸಿ, ಎಲ್ಲಾ ಚಿತ್ರಮಂದಿಗಳು, ಶಾಪಿಂಗ್ ಮಾಲ್‌ಗಳು, ಜೀಮ್, ಕ್ರೀಡಾ ಸಂಕೀರ್ಣ, ಈಜುಕೊಳಗಳು, ಮನರಂಜನಾ ಪಾರ್ಕ್‌ಗಳು, ಸಭಾಂಗಣಗಳು, ಆಸೆಂಬ್ಲಿ ಹಾಲ್‌ಗಳು ಹಾಗೂ ಮುಂತಾದವುಗಳು, ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡಾ / ಮನರಂಜನಾ / ಶೈಕ್ಷಣಿಕ / ಸಾಂಸ್ಕತಿಕ / ಧಾರ್ಮಿಕ ಸಮಾರಂಭಗಳು, ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಭೇಟಿ ನಿಷೇಧಿಸಿ, ನಿರ್ಬಂಧಿಸಲಾಗಿರುತ್ತದೆ.

ಸಾರ್ವಜನಿಕರ ಸುರಕ್ಷತೆಗಾಗಿ, ಎಲ್ಲಾ ಸಾರ್ವಜನಿಕ ಅನಗತ್ಯ ಓಡಾಟಗಳು ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ನಿರ್ಬಂಧಿಸಲಾಗಿದೆ. ಸ್ಥಳೀಯ ಪ್ರಾಧಿಕಾರಗಳು ಸಿಆರ್‌ಪಿಸಿ ಸೆಕ್ಷನ್ 145 ರಡಿಯಲ್ಲಿ ಕರ್ಪ್ಯೂ ವಿಧಿಸಿ ನಿಯಮಾನುಸಾರ ಸೂಕ್ತ ಮಾರ್ಗದರ್ಶಿಗಳನ್ನು ಹೊರಡಿಸುವುದು ಹಾಗೂ ಅನುಪಾಲನೆಯನ್ನು ಖಾತರಿಪಡಿಸುವುದು. ಎಲ್ಲಾ ಜೋನ್‌ಗಳಲ್ಲಿ 65 ವರ್ಷ ಮೀರಿದ ವ್ಯಕ್ತಿಗಳು, ಗರ್ಭಿಣಿಯರು ಹಾಗೂ 10 ವರ್ಷದ ಕೆಳಪಟ್ಟ ಮಕ್ಕಳು ಮನೆಯಲ್ಲಿಯೇ ಇರಬೇಕು. ಅತ್ಯಗತ್ಯ ಹಾಗೂ ವೈದ್ಯಕೀಯ ಉದ್ದೇಶಗಳಿಗೆ ಹೊರತುಪಡಿಸಿ, ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಹೊರರೋಗಿ ವಿಭಾಗಗಳನ್ನು ತೆರೆಯುವಂತಿಲ್ಲ. ಆದರೆ, ಕೆಂಪು, ಕಿತ್ತಳೆ, ಹಸಿರು ವಲಯಗಳಲ್ಲಿ ಮಾತ್ರ ಇವುಗಳನ್ನು ತೆರೆಯುವುದು.ಕಟ್ಟುನಿಟ್ಟಾದ ಪರಿವಿಧಿಯ ಪಾಲನೆ, ಸ್ಪಷ್ಟ ಪ್ರವೇಶ ಹಾಗೂ ನಿರ್ಗಮನಗಳನ್ನು ನಿರ್ವಹಿಸುವುದು, ಸರಕು ಹಾಗೂ ವೈದ್ಯಕೀಯ ಸೇವೆಗಳನ್ನು ತಲುಪಿಸಲು ಮಾತ್ರ ಓಡಾಟಕ್ಕೆ ಅನುಮತಿಸುವುದು, ತಪಾಸಣೆ ಮಾಡದೆ ಯಾರನ್ನು ಒಳಹೋಗಲು ಅನುಮತಿಸುವಂತಿಲ್ಲ, ಒಳಹೋಗುವ ಹಾಗೂ ಹೊರಬರುವ ವ್ಯಕ್ತಿಗಳ ವಿವರಗಳನ್ನು ಕಡ್ಡಾಯಾಗಿ ದಾಖಲಿಸುವುದು ಕಂಟೈನ್‌ಮೆಂಟ್ ಜೋನ್‌ನ ಚಟುವಟಿಕೆಗಳಾಗಿದೆ.

ರೆಡ್ ಜೋನ್‌ನ ಚಟುವಟಿಕೆಗಳಲ್ಲಿ(ಕನ್‌ಟೈನ್‌ಮೆಂಟ್ ಜೋನ್‌ನ ಹೊರವಲಯಗಳಲ್ಲಿ), ಸೈಕಲ್ ರಿಕ್ಷಾ ಹಾಗೂ ಆಟೋ ರಿಕ್ಷಾಗಳ ಬಳಕೆ, ಟ್ಯಾಕ್ಸಿ ಹಾಗೂ ಕ್ಯಾಬ್‌ಗಳ ಬಳಕೆ, ಜಿಲ್ಲೆಯ ಒಳಗಡೆ ಹಾಗೂ ಹೊರಗಡೆ ಬಸ್ಸುಗಳ ಸಂಚಾರ, ಕ್ಷೌರಿಕ ಅಂಗಡಿಗಳು, ಸ್ಪಾ ಹಾಗೂ ಸಲೂನ್‌ಗಳ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.ವೈಯುಕ್ತಿಕ ಹಾಗೂ ವಾಹನಗಳು ಅನುಮತಿಸಿದ ಚಟುವಟಿಕೆಗಳಿಗೆ ಹೊರತುಪಡಿಸಿ ಓಡಾಡುವಂತಿಲ್ಲ(ದ್ವಿಚಕ್ರ ವಾಹನದಲ್ಲಿ ಒಬ್ಬರಿಗೆ ಮಾತ್ರ ಹಾಗೂ ನಾಲ್ಕು ಚಕ್ರದ ವಾಹನದಲ್ಲಿ ಡೈವರ್ ಹೊರತುಪಡಿಸಿ ಇಬ್ಬರಿಗೆ ಮಾತ್ರ). ನಗರ ಪ್ರದೇಶಗಳಲ್ಲಿನ ಕೈಗಾರಿಕಾ ಚಟುವಟಿಕೆಗಳನ್ನು ಕೇವಲ Special Economic Zones (SEZs), Export oriented unit (EOUs), ಅತ್ಯಗತ್ಯ ವಸ್ತುಗಳನ್ನು ತಯಾರಿಸುವ ಘಟಕಗಳು, ಔಷಧಿ ತಯಾರಿಸುವ ಮತ್ತು ವೈದ್ಯಕೀಯ ಸಲಕರಣೆಗಳನ್ನು ತಯಾರಿಸುವ ಘಟಕಗಳು, ಗ್ರಾಮೀಣ ಪ್ರದೇಶದಲ್ಲಿನ ಎಲ್ಲಾ ಕೈಗಾರಿಕಾ ಚಟುವಟಿಕೆಗಳು ನಡೆಸಬಹುದಾಗಿದೆ.

ನಗರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೇವಲ ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಕಟ್ಟಡ ನಿರ್ಮಾಣ ಕೈಗೊಳ್ಳಬಹುದಾಗಿದೆ. ಬೇರೆ ಕಡೆಯಿಂದ ಕಾರ್ಮಿಕರನ್ನು ಕರೆತರಲು ಅವಕಾಶವಿರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಕಟ್ಟಡ ನಿರ್ಮಾಣ ಕಾರ್ಯವನ್ನು ಅನುಮತಿಸಿದೆ.ನಗರ ಪ್ರದೇಶಗಳಲ್ಲಿ ಮಾಲ್‌ಗಳು, ಸಂತೇ, ಮಾರುಕಟ್ಟೆ ಸಂಕೀರ್ಣಗಳಲ್ಲಿ ವ್ಯಾಪಾರವನ್ನು ನಿಷೇಧಿಸಿದೆ, ಅದ್ವೀತಿಯ (ಸಿಂಗಲ್) ಅಂಗಡಿಗಳನ್ನು, ಬಡಾವಣೆಗಳಿಗೆ ಹೊಂದಿಕೊಂಡಿರುವ ಅಂಗಡಿಗಳನ್ನು, ಬಜಾರ್ ಸ್ಟ್ರೀಟ್, ಬಡಾವಣೆಯ ಒಳಗಡೆ ಇರುವಂತಹ ಅಂಗಡಿಗಳನ್ನು ಎಲ್ಲಾ ತರಹದ ಅಗತ್ಯ ಹಾಗೂ ಅನಾಗತ್ಯ ಅಂಗಡಿಗಳನ್ನು ತೆರೆಯಲು ಅನುಮತಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಮಾಲ್‌ಗಳನ್ನು ಹೊರತುಪಡಿಸಿ ಎಲ್ಲಾ ಅಗತ್ಯ ಹಾಗೂ ಅನಾಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಬಹುದಾಗಿದೆ(ಎರಡು ಗಜದ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದು). ಇ – Commerce ಚಟುವಟಿಕೆಗಳನ್ನು ಕೇವಲ ಅವಶ್ಯಕ ಸಾಮಾಗ್ರಿಗಳಿಗೆ ಮಾತ್ರ ಅನುಮತಿಸಿದೆ. ಖಾಸಗಿ ಕಛೇರಿಗಳು ಶೇಕಡಾ 33ರಷ್ಟು ಸಿಬ್ಬಂದಿಗಳನ್ನು ಮಾತ್ರ ಕೆಲಸ ನಿರ್ವಹಿಸುವುದು. ಉಳಿಕೆ ಸಿಬ್ಬಂದಿಗಳಿಗೆ ಮನೆಯಲ್ಲಿಯೇ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಲು ಅನುಮತಿಸಿದೆ.

ಈ ಚಟುವಟಿಕೆಗಳನ್ನು ನಿರ್ವಹಿಸುವ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆಯನ್ನು ಕಡ್ಡಾಯಪಡಿಸಲಾಗಿದೆ. ಮತ್ತು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸಲು ಅನುಮತಿಸಿದೆ.ಒಂದು ವೇಳೆ ಯಾರಾದರೂ ಈ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಪ್ರಕೃತಿ ವಿಕೋಪ ಕಾಯ್ದೆ 2005ರ ನಿಯಮ 51 ರಿಂದ 60 ಹಾಗೂ ಐಪಿಸಿ ಸೆಕ್ಷನ್ 188 ರಡಿಯಲ್ಲಿ ದಂಡನೆ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಹಾಗೂ ನಿಯಂತ್ರಣ ಕ್ರಮಗಳು ಮೇ.03 ರ ಮಧ್ಯರಾತ್ರಿ 12.00 ಗಂಟೆಯಿಂದ ಮೇ.13 ರ ಮಧ್ಯರಾತ್ರಿ12.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದುಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಜಿಲ್ಲಾದಂಡಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ರವೀಂದ್ರ ಪಿ.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಕೀಯ

ರಾಜ್ಯದ ಪರಿಸ್ಥಿತಿ ಆಲಿಬಾಬಾ ಮೂವತ್ತನಾಲ್ಕು ಕಳ್ಳರು ಎನ್ನುವಂಥಾಗಿದೆ: ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ರಾಜ್ಯದ ಪರಿಸ್ಥಿತಿ ಆಲಿಬಾಬಾ ಮೂವತ್ತನಾಲ್ಕು ಕಳ್ಳರು ಎನ್ನುವಂಥಾಗಿದೆ: ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy)

[ccc_my_favorite_select_button post_id="109828"]
ಡಿಸೆಂಬರ್‌ನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಅಸ್ಮಿತೆ ಪ್ರತಿಬಿಂಬಿಸಲು ಅವಕಾಶ: ಡಾ.ಮಹೇಶ್ ಜೋಶಿ

ಡಿಸೆಂಬರ್‌ನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಅಸ್ಮಿತೆ ಪ್ರತಿಬಿಂಬಿಸಲು

ಕನ್ನಡ ಭಾಷೆಯು ಸ್ವತಂತ್ರ ಭಾಷೆಯಾಗಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡದ ಅಸ್ಮಿತೆ ಪ್ರತಿಬಿಂಬಿಸಲು ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ (Dr.Mahesh Joshi)

[ccc_my_favorite_select_button post_id="109751"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಹೆಂಡತಿಯ ಕೊಂದ ಪತಿ..!l Murder

ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಹೆಂಡತಿಯ ಕೊಂದ ಪತಿ..!l Murder

ಹೆಂಡತಿ ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಸಿಟ್ಟಿಗೆದ್ದ ಪತಿ ಆಕೆಯನ್ನು ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ನಡೆದಿದೆ.

[ccc_my_favorite_select_button post_id="109624"]
ಜಗನ್ ಕಾರು ಚಕ್ರದಡಿ ಅಭಿಮಾನಿ ಸಾವು..!| ಆಘಾತಕಾರಿ Video ವೈರಲ್

ಜಗನ್ ಕಾರು ಚಕ್ರದಡಿ ಅಭಿಮಾನಿ ಸಾವು..!| ಆಘಾತಕಾರಿ Video ವೈರಲ್

ಅಭಿಮಾನಿಗಳು ಕೂಡ ಕಾರಿನ ಚಕ್ರದಡಿ ವೃದ್ಧರೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಲೆಕ್ಕಿಸದೇ ಜಗನ್ (Jagan) ಅವರನ್ನು ಮುಟ್ಟಲು, ಹತ್ತಿರದಿಂದ ನೋಡಲು ನುಗ್ಗಿ ಬರುತ್ತಿದ್ದರು

[ccc_my_favorite_select_button post_id="109775"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]