ದೊಡ್ಡಬಳ್ಳಾಪುರ : ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಬಾಗಶ: ಲಾಕ್ ಡೌನ್ ಅಗಿದೆ.
ನಗರದ ಅಂಗಡಿ, ವ್ಯಾಪಾರ ವಹಿವಾಟು ಬಂದ್ ಆಗಿವೆ. ಸಾರಿಗೆ, ಆಟೋ ಸಂಚಾರವೂ ಸ್ಥಗಿತ ಮಾಡಲಾಗಿದೆ. ಪ್ರಮುಖ ರಸ್ತೆಗಳೆಲ್ಲವೂ ಖಾಲಿಯಾಗಿದ್ದು ಹಲವೆಡೆ ಪೊಲೀಸ್ ಇಲಾಖೆ ಬ್ಯಾರೆಕೇಡ್ ನಿರ್ಮಿಸಿ ರಸ್ತೆ ಸಂಚಾರವನ್ನೂ ಬಂದ್ ಮಾಡಿದೆ.
ಭಾನುವಾರ ಲಾಕ್ ಡೌನ್ ಗೆ ತಾಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿದೆ. ತುರ್ತು ಸೇವೆ ಹೊರತುಪಡಿಸಿ ಇನ್ನೆಲ್ಲ ಸೇವೆ ಬಂದ್ ಆಗಿವೆ. ಈ ಮೊದಲು ಸರ್ಕಾರ ಲಾಕ್ ಡೌನ್ ನಿಂದ ಕೆಲ ವಿನಾಯತಿ ನೀಡಿದ ಬಳಿಕ ನಗರದಲ್ಲಿ ಜನ ಸಂಚಾರ ಕಾಣುತ್ತಿತ್ತು.
ಸರ್ಕಾರ ಸಂಡೆ ಲಾಕ್ ಡೌನ್ ಘೋಷಣೆಯ ನಡುವೆ ಮಾಂಸ,ಕೋಳಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟ ಕಾರಣ 11ಗಂಟೆಯ ವರೆಗೂ ಅಲ್ಪ ಪ್ರಮಾಣದಲ್ಲಿ ಜನರ ಓಡಾಟ ಕಂಡು ಬಂತು.