ದೊಡ್ಡಬಳ್ಳಾಪುರ : ಸತತ ಮೂರು ಸಲ ದೊಡ್ಡಬಳ್ಳಾಪುರ ತಾಲೂಕಿನ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿ,ಹ್ಯಾಟ್ರಿಕ್ ಹಿರೋ ಎನಿಸಿಕೊಂಡಿದ್ದ ಜೆ.ನರಸಿಂಹಸ್ವಾಮಿ ಇಂದು (73)ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಹಾಗು ಆಂಜಿನಮ್ಮರ 7ಜನ ಮಕ್ಕಳಲ್ಲಿ,ಮೊದಲನೆ ಮಗನಾಗಿ 25.05.1947ರಂದು ತೂಬಗೆರೆಯಲ್ಲಿ ಜನಿಸಿದ ಜೆ.ನರಸಿಂಹಸ್ವಾಮಿ,ಪಿಯುಸಿ ವ್ಯಾಸಂಗಮಾಡಿದ್ದಾರೆ.
ತೂಬಗೆರೆ ಮಂಡಲ ಪಂಚಾಯಿತಿ ಪ್ರಧಾನರಾಗಿ ರಾಜಕೀಯ ಜೀವನವನ್ನು ಆರಂಭಿಸಿದ ಅವರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ,ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾಗಿ,ತಾಲೂಕು ಪಂಚಾಯಿತಿ ಸದಸ್ಯರಾಗಿ,ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ನಂತರ ಮೂರು ಸಲ ತಾಲೂಕಿನ ಶಾಸಕರಾಗಿ ಆಯ್ಕೆಯಾದವರು.
ಆಪರೇಷನ್ ಕಮಲಕ್ಕೆ ಒಳಗಾದ ಸಂದರ್ಭದಲ್ಲಿ ತಮ್ಮ ರಾಜಕೀಯ ಪಟ್ಟುಗಳನ್ನು ತೋರಿಸಿ ವಿಜೇತರಾದ ಜೆ.ನರಸಿಂಹಸ್ವಾಮಿ ಆಗಿನ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಜೆ.ನರಸಿಂಹಸ್ವಾಮಿಯವರು ಪತ್ನಿ ಗಂಗಮ್ಮರನ್ನು ಅಗಲಿದ್ದು,ಇಬ್ಬರು ಪುತ್ರಿಯರು ಹಾಗೂ ಒಬ್ಬ ಮಗನನ್ನು ಹೊಂದಿದ್ದಾರೆ.