ದೊಡ್ಡಬಳ್ಳಾಪುರ : ನೇಕಾರರ ಬಳಿಯಿರುವ ಸೀರೆ ದಾಸ್ತಾನು ಖರೀದಿ ಮತ್ತು ನೇಕಾರ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ.ಜೂನ್ 1ರಂದು ಬೆಸೆಂಟ್ ಪಾರ್ಕ್ ರಸ್ತೆಯಲ್ಲಿರುವ,ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೈಮಗ್ಗ ಮತ್ತು ಜವಳಿ ಕಚೇರಿ ಆವರಣದಲ್ಲಿ ನೇಕಾರರ ಹೋರಾಟ ಸಮಿತಿಯಿಂದ ಧರಣಿ ನಡೆಸಲಾಗುವುದೆಂದು ನೇಕಾರರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜು ತಿಳಿಸಿದ್ದಾರೆ.
ಹರಿತಲೇಖನಿಯೊಂದಿಗೆ ಈ ಕುರಿತು ಮಾತನಾಡಿರುವ ಅವರು,ಕೋವಿಡ್ 19ರ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಕಾರಣ ವಾಣಿಜ್ಯ ಮತ್ತು ಕೈಗಾರಿಕೆಗಳು ನಿಂತಿದ್ದು.ರಾಜ್ಯದ ನೇಯ್ಗೆ ಉದ್ಯಮ ಸಂಪೂರ್ನ ಸ್ಥಗಿತಗೊಂಡು ಈಗಾಗಲೆ ಎರಡು ತಿಂಗಳು ಕಳೆದಿದೆ.ಈ ಉದ್ಯಮದಲ್ಲಿ ಉತ್ಪಾದಿಸುವ ಸೀರೆಗಳ ಮಾರಾಟ ಕೇಂದ್ರಗಳಾದ ಆಂದ್ರ,ತೆಲಂಗಾಣ,ತಮಿಳುನಾಡು,ಮಹಾರಾಷ್ಟ್ರ,ಗುಜರಾತ್,ಕೆರಳ,ಬಂಗಾಳ ರಾಜ್ಯಗಳಲ್ಲಿ ಕೋವಿಡ್ 19ಮೊದಲ ಸ್ಥಾನದಲ್ಲಿವೆ.ಈ ಕೇಂದ್ರಗಳು ಸಹಜ ಸ್ಥಿತಿಗೆ ಬರಲು ಸುಮಾರು ತಿಂಗಳುಗಳೆ ಬೇಕಾಗಿದೆ.ಅಲ್ಲಿಯವರೆಗೂ ಉದ್ಯಮ ನಡೆಸಲು ಸಾದ್ಯವಾಗದ ಪರಿಸ್ಥಿತಿ ಇರುವ ಕಾರಣ,ಈ ಉದ್ಯಮವನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು,ಉದ್ಯಮ ನಡೆಸಲಾಗದೆ ಸಂಕಷ್ಟಕ್ಕೆ ಸಿಲುಕಿರುವ ನೇಕಾರ ಹಾಗೂ ನೇಯ್ಗೆ ಕಾರ್ಮಿಕರನ್ನು ಉಳಿಸುವಂತೆ ಒತ್ತಾಯಿಸಲು ಧರಣಿ ಆಯೋಜಿಸಲಾಗಿದೆ ಎಂದರು.
ಒತ್ತಾಯಗಳು
1.ನೇಕಾರರ ಬಳಿ ದಾಸ್ತಾನಿರುವ ಸೀರೆಗಳನ್ನು ಸರ್ಕಾರ ಖರೀದಿ ಮಾಡಬೇಕು.
2.ನೇಕಾರ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಬೇಕು.
3.ನೇಕಾರರಿಗೆ ದುಡಿಮೆ ಬಂಡವಾಳಕ್ಕೆ ಬಡ್ಡಿ ರಹಿತ ಸಾಲ ನೀಡಬೇಕು.
4.ನೇಕಾರ ಕೂಲಿ ಕಾರ್ಮಿಕರು ಮತ್ತು ನೇಕಾರರಿಗೆ ಸರ್ಕಾರದ ಜವಳಿ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು.
5.ಆಂದ್ರ,ತಮಿಳುನಾಡು ರಾಜ್ಯಗಳ ಮಾದರಿಯಲ್ಲಿ ಆರ್ಥಿಕ ಸಹಾಯ ನೀಡಬೇಕು.