ಲಡಾಖ್: ಲಡಾಖಿನ ಗಲ್ವಾನ್ ವ್ಯಾಲಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಚೀನಿ ಸೈನಿಕರು ದಾಳಿ ನಡೆಸಿರುವ ಪರಿಣಾಮ ಭಾರತೀಯ ಸೇನೆಯ ಒಬ್ಬ ಸೈನ್ಯಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಗಡಿಯಿಂದ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಯ ಮಾತುಕತೆ ನಡೆಯುತ್ತಿರಯವಾಗಲೇ ಚೀನಿ ಸೈನಿಕರು ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ ಎನ್ನಲಾಗಿದೆ.
ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನೆಯ ಸೈನ್ಯಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಘಟನೆಯಲ್ಲಿ ಚೀನಾ ಸೈನಿಕರು ಸಾವನಪ್ಪಿದ್ದಾರೆಂದು,ಚೀನಾದ ಗ್ಲೋಬಲ್ ಟೈಮ್ಸ ಪತ್ರಿಕೆ ಮುಖ್ಯ ಸಂಪಾದಕ ಟ್ವಿಟ್ ಮಾಡಿದ್ದಾರೆ.
ಲಡಾಕ್ ಬಿಕ್ಕಟ್ಟು ಪರಿಹರಿಸಲು ಶಾಂತಿ ಮಾತುಕತೆ ನಡೆಯುತ್ತಿರು ಸಂಧರ್ಭದಲ್ಲಿ ಚೀನಿ ಸೈನಿಕರು ಉದ್ಧಟತನ ಮೆರೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
******