ದೊಡ್ಡಬಳ್ಳಾಪುರ: ಭಾರತ – ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಸರ್ವಜ್ಞ ಕುಂಬಾರ ಸಂಘದ ವತಿಯಿಂದ ನಗರದ ಕುಂಬಾರ ಪೇಟೆಯಲ್ಲಿ ದೀಪ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರದ್ಧಾಂಜಲಿಯ ಕಾರ್ಯಕ್ರಮದಲ್ಲಿ ಕುಂಬಾರ ಸಂಘದ ಅಧ್ಯಕ್ಷ ಬಿ.ವಿರೂಪಾಕ್ಷ ಮಾತನಾಡಿ,ದೇಶದ ಗಡಿಯೊಳಗೆ ನುಸುಳಿ ಸಂಘರ್ಷ ಮಾಡಿ ಭಾರತದ ಸೈನಿಕರನ್ನು ಬಲಿ ಪಡೆದಿದ್ದಾರೆ. ಇಡೀ ಭಾರತ ದೇಶದ ಜನರೆಲ್ಲಾ ಸಾಮೂಹಿಕವಾಗಿ ಒಗ್ಗಟ್ಟಾಗಿದ್ದೇವೆ. ನರಿ ಬುದ್ಧಿಯ ಚೀನಾಗೆ ತಕ್ಕಪಾಠ ಕಲಿಸಬೇಕಿದೆ. ಹಿಂದೆ ಇದ್ದಂತಹ ಭಾರತವಲ್ಲ ನಮದೀಗ. ನಾವು ಎಲ್ಲಾ ರೀತಿ ಬಲಿಷ್ಠವಾಗಿದ್ದೇವೆ. ನಮ್ಮ ದೇಶದ ಪ್ರಧಾನಿ ಸಹಿತ ಒಳ್ಳೆಯ ನಿರ್ಧಾರ ತೆಗೆದುಕೊಳ್ಳು ತ್ತಿದ್ದು, ಇದೇ ರೀತಿ ಚೀನಾ ನರಿ ಬುದ್ಧಿ ತೋರಿದರೆ ತಕ್ಕ ಪಾಠ ಕಲಿಸಲಾಗುವುದೆಂದರು.
ಕಾರ್ಯದರ್ಶಿ ಜಿ.ಉಮೇಶ್.ಸುಧೀಂದ್ರ.ಸುರೇಶ್. ರವಿಶಂಕರ್.ರಾಮಕೃಷ್ಣಪ್ಪ.ಶ್ರೀಧರ್. ಶ್ರೀಕಂಠಮೂರ್ತಿ ಮತ್ತಿತರಿದ್ದರು.