ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಗು ಹಾಗೂ ಬೆಂಗಳೂರು ನಗರ ಜಿಲ್ಲೆಯ ನಾಲ್ವರು ವ್ಯಕ್ತಿಗಳಲ್ಲಿ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ.
ದೊಡ್ಡಬಳ್ಳಾಪುರದ ಚೈತನ್ಯನಗರದ ನಿವಾಸಿ 10 ವರ್ಷದ ಬಾಲಕ(ಪಿ-16745) ಕರೊನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-11165) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ ಹೊಂದಿದ್ದಾರೆ.
ಉಳಿದಂತೆ ಬೆಂಗಳೂರು ನಗರ ಜಿಲ್ಲೆಯ ಚಿಕ್ಕಬಾಣಾವರದ ನಿವಾಸಿ 51 ವರ್ಷದ ಪುರುಷ(ಪಿ-16742) ಹಾಗೂ ಕೆ.ಆರ್.ಪುರಂ ನ ನಿವಾಸಿ 22 ವರ್ಷದ ಯುವತಿ(ಪಿ-16744) ಇನ್‌ಫ್ಲೂಯೆನ್ಜಾ ಲೈಕ್ ಇಲ್ನೆಸ್(ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ, ಯಲಹಂಕದ ನಿವಾಸಿ 42 ವರ್ಷದ ಪುರುಷ(ಪಿ-16743) ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-11992) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಬೆಂಗಳೂರು ನಗರ ಜಿಲ್ಲೆಯ ಬಸವೇಶ್ವರನಗರದ ನಿವಾಸಿ 48 ವರ್ಷದ ವ್ಯಕ್ತಿಯ(ಪಿ-16746) ಕರೋನಾ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಸೋಂಕಿತ ವ್ಯಕ್ತಿಗಳು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.