ದೊಡ್ಡಬಳ್ಳಾಪುರ: ಇಬ್ಬರು ಕರೊನಾ ವಾರಿಯರ್ಸ್‌ಗೂ ಸೇರಿದಂತೆ ತಾಲೂಕಿನ ಕರೊನಾ ಸೋಂಕಿತರ ಸಂಖ್ಯೆ ಇಂದು 150ಕ್ಕೆ ಏರಿಕೆಯಾಗಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಬುಲೆಟಿನಲ್ಲಿ ಇಂದು 14 ಮಂದಿ ಗಂಡು ಹಾಗೂ 7ಮಂದಿ ಮಹಿಳೆಯರು ಸೇರಿ ಇಪ್ಪತ್ತೊಂದು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ನಗರದ ಸಾರ್ವಜನಿಕ ಆಸ್ಪತ್ರೆಯ ಕ್ವಾಟ್ರಸ್ಸಿನ ಒಬ್ಬ ಮಹಿಳೆ, ಪದವಿ ಕಾಲೇಜು ರಸ್ತೆಯಲ್ಲಿ ಒಂದು ಗಂಡು, ರೋಜಿಪುರಲ್ಲಿ ಒಂದು ಗಂಡು,ಭುವನೇಶ್ವರಿ ನಗರದಲ್ಲಿ ಒಂದು ಗಂಡು, ಶಾಂತಿನಗರದಲ್ಲಿ ಒಂದು ಹೆಣ್ಣು, ಧರ್ಮರಾಯ ಕಾಲೋನಿಯಲ್ಲಿ ಒಂದು ಗಂಡು, ಮುತ್ಸಂದ್ರದಲ್ಲಿ ಒಂದು ಹೆಣ್ಣು,ದೇವರಾಜ ನಗರದಲ್ಲಿ ಒಂದು ಗಂಡು, ರೈಲ್ವೆ ಸ್ಟೇಷನ್ ಬಳಿ ಇಬ್ಬರು ಮಹಿಳೆಯರು, ಚೈತನ್ಯ ನಗರದಲ್ಲಿ ಮೂರು ಮಂದಿ ಪುರುಷರು, ಓರ್ವ ಮಹಿಳೆ, ದೊಡ್ಡಹೆಜ್ಜಾಜಿಯ ಒಂದು ಗಂಡು, ಇಸ್ತೂರು ಕಾಲೋನಿಯಲ್ಲಿ ಒಂದು ಗಂಡು, ಬೋಕಿಪುರದಲ್ಲಿ ಒಂದು ಗಂಡು, ಬಾಶೆಟ್ಟಹಳ್ಳಿಯಲ್ಲಿ ಒಂದು ಗಂಡು, ಪಾಲನಜೋಗಹಳ್ಳಿ ಒಂದು ಗಂಡು, ದಾಸಗೊಂಡನಹಳ್ಳಿಯಲ್ಲಿ ಒಂದು ಗಂಡು ಹಾಗೂ ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಪ್ರಸ್ತುತ ತಾಲೂಕಿನಲ್ಲಿ 150 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ಆರು ಮಂದಿ ಮೃತ ಪಟ್ಟಿದ್ದರೆ,ಆರು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 38 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 100 ಮಂದಿಯನ್ನು ದೇವನಹಳ್ಳಿ/ಹಜ್ ಭವನ/ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನ್ ಅಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.