ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು,ಸೋಂಕಿತರ ಸಂಖ್ಯೆ ದ್ವಿಶಕದ ಗಡಿ ತಲುಪಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 70ವರ್ಷದ ಮಹಿಳೆ ಸಾವನಪ್ಪಿದ್ದು,ಕಳೆದ ಮೂರು ದಿನಗಳಿಂದ ನಗರ ವಾಸಿಗಳನ್ನು ಕಾಡುತ್ತಿದ್ದ ಕರೊನಾ ಸೋಂಕು,ಗ್ರಾಮಾಂತರ ಪ್ರದೇಶಕ್ಕು ಕಾಲಿಟ್ಟಿದೆ.
ಭಾನುವಾರವೆಂಬ ಬಿಡುವು ನೀಡದ ಪಾಪಿ ಕರೊನಾ.ಇಂದು ಸಹ ಮತ್ತೆ ಇಪ್ಪತ್ತಾರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಭಾನುವಾರ ಸಂಜೆ ಬಿಡುಗಡೆ ಮಾಡಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಬುಲೆಟಿನಲ್ಲಿ ಇಂದು 18 ಮಂದಿ ಪುರುಷರು ಹಾಗೂ 8 ಮಂದಿ ಮಹಿಳೆಯರು ಸೇರಿ ಇಪ್ಪತ್ತಾರು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ,ಬಾಶೆಟ್ಟಿಹಳ್ಳಿ,ಸೋಮೇಶ್ವರ ಬಡಾವಣೆ,ರೋಜಿಪುರ,ಶಾಂತಿನಗರ,ಮಾರುತಿ ನಗರ,ದರ್ಗಾಜೋಗಹಳ್ಳಿ,ಖಾಸ್ ಬಾಗ್,ನಗರ್ತರಪೇಟೆ,ಜನತಾ ನರ್ಸಿಂಗ್ ಹೋಂ, ಇಸ್ಲಾಂಪುರ,ಕಲ್ಲೋಡು,ಹೆಗ್ಗಡಿಹಳ್ಳಿ,ತಿಪ್ಪಾಪುರ,ಡಿ.ಕ್ರಾಸ್,ಪಾಲನಜೋಗಹಳ್ಳಿ, ,ಮುಕ್ಕೆನಹಳ್ಳಿ,ಲಕ್ಷ್ಮಿ ದೇವಿಪುರ,ಕನಸವಾಡಿ ಹೋಬಳಿಯ ರಾಮದೇವನಪುರಗಳಲ್ಲಿ ಸೋಂಕು ದೃಢಪಟ್ಟಿದೆ.
ಭಾನವಾರದ ವರದಿಯಂತೆ ಪ್ರಸ್ತುತ ತಾಲೂಕಿನಲ್ಲಿ 197 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,ಏಳು ಮಂದಿ ಮೃತ ಪಟ್ಟಿದ್ದರೆ,ಆರು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 50 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 134 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನ್ ಅಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.