ಬೆಂಗಳೂರು: ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಕರೊನಾ ಚೇತರಿಕೆ ಶೇ.5.67%ರಷ್ಟು ಏರಿಕೆ ಕಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವಿಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಒಂದು ವಾರದ ಅಂಶಗಳನ್ನು ಹಂಚಿಕೊಂಡಿರುವ ಸುಧಾಕರ್, ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.5.67ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.
ಬೆಂಗಳೂರು ನಗರದಲ್ಲಿ ಶೇ.9.17%ರಷ್ಟು ಏರಿಕೆ ಕಂಡಿದೆ. ನೆನ್ನೆ ಸಂಜೆಯ ವೇಳೆಗೆ ರಾಜ್ಯದ ಚೇತರಿಕೆ ದರ ಶೇ.42 81% ರಷ್ಟಿದ್ದು ಬೆಂಗಳೂರಿನಲ್ಲಿ ಶೇ.35.14% ಚೇತರಿಕೆ ದರ ದಾಖಲಾಗಿದೆ ಎಂದು ಅಂಕಿ ಅಂಶ ನೀಡಿದ್ದಾರೆ.