ದೊಡ್ಡಬಳ್ಳಾಪುರ: ಕರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ಮುಂದೂಡಲಾಗಿದ್ದ ನಗರದ ಚಿಕ್ಕಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಪ್ರಸಿದ್ದ ಶ್ರೀ ಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹೋತ್ಸವ ಸೋಮವಾರ ರಾತ್ರಿ ಸರಳವಾಗಿ ನಡೆಯಿತು.
ಈ ಬಾರಿಯ ಕರಗವನ್ನು ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿಯ ವೈ.ಭೀಮರಾಜ್ ಹೊತ್ತು ಕರಗದ ಸಾಂಪ್ರದಾಯಿಕ ಧಾರ್ಮಿಕ ವಿಗಳನ್ನು ನಡೆಸಿದರು.
ಕರಗ ಮಹೋತ್ಸವದ ಅಂಗವಾಗಿ ಹಸಿಕರಗ ಹಾಗೂ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು.ಧರ್ಮರಾಯಸ್ವಾಮಿ ದೇವಾಲಯದಿಂದ ಏಳು ಸುತ್ತಿನ ಕೋಟೆಗೆ ಆಗಮಿಸಿ,ದೇವಾಲಯ ಟ್ರಸ್ಟ್ ಕಾರ್ಯಕಾರಿ ಸಮಿತಿ,ಅರ್ಚಕರು ಹಾಗೂ ಸೀಮಿತ ಕುಲಬಾಂಧವರ ಭಾಗವಹಿಸುವಿಕೆಯಿಂದ ಸಾಂಕೇತಿಕ ಕರಗ ನಡೆಸಲಾಯಿತು. ಸಾರ್ವಜನಿಕರಿಗೆ ಕರಗ ಉತ್ಸವದಲ್ಲಿ ಭಾಗವಹಿಸಲು ಅವಕಾಶವಿಲ್ಲದಿದ್ದರಿಂದ ನಿರಾಶೆಗೊಳ್ಳಬೇಕಾಯಿತು.
ಮೇ7ರಂದು ಕರಗ ಮಹೋತ್ಸವ ನಡೆಯಬೇಕಿತ್ತು. ಏ.29ರಿಂದ ದೇವಾಲಯದಲ್ಲಿ ಧ್ವಜಾರೋಹಣ,ಪೂಜಾದಿಗಳು ವಿದ್ಯುಕ್ತವಾಗಿ ಆರಂಭಗೊಳ್ಳಬೇಕಿತ್ತು.ಆದರೆ ಕರೊನಾ ಲಾಕ್ಡೌನ್ ಘೋಷಣೆ ಹಿನ್ನಲೆಯಲ್ಲಿ ಕರಗ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಈಗ ಸರಳವಾಗಿ ಆಚರಿಸುವಂತೆ ಸರ್ಕಾರ ಸೂಚಿಸಿದ್ದ ಹಿನ್ನಲೆಯಲ್ಲಿ ಸೀಮಿತ ಜನರೊಂದಿಗೆ ಆಚರಿಸಲಾಗಿದೆ.ಮುಂದಿನ ವರ್ಷಗಳಲ್ಲಿ ಕರೊನಾ ದೂರವಾಗಿ ವಿಜೃಂಭಣೆಯಿಂದ ಆಚರಿಸುವ ಸಂದರ್ಭ ಒದಗಿ ಬರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಧರ್ಮರಾಯಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ತಿಳಿಸಿದರು.