ದೊಡ್ಡಬಳ್ಳಾಪುರ: ವನ್ಯ ಪ್ರಾಣಿಗಳ ಬೇಟೆಯಾಡಲು ಪೊದೆಯೊಳಗೆ ಹಾಕಿದ ಉರುಲಿಗೆ ಚಿರತೆ ಬಿದ್ದು ಬಲೆಯಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದೆ,
ತಾಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಡು ಪ್ರಾಣಿಗಳ ಬೇಟೆಗೆಂದು ಗಿಡ ಗಂಟೆಗಳಲ್ಲಿನ ಪೊದೆಯೊಳಗೆ ಉರುಲಿನ ಬಲೆ ಹಾಕಲಾಗಿದ್ದು,ನಿನ್ನೆ ರಾತ್ರಿ ಆಹಾರ ಅರಸಿ ಬಂದ ಚಿರತೆ ಉರುಲಿನ ಬಲೆಗೆ ಸಿಲುಕಿದೆ, ಇಂದು ಹೊಲದ ಬಳಿ ರೈತರು ಹೋದಾಗ ಪೊದೆಯೊಳಗೆ ಚಿರತೆ ಒದ್ದಾಡುತ್ತಿರುವುದು ಕಣ್ಣಿಗೆ ಬಿದ್ದಿಗೆ,ಚಿರತೆಯ ಹಿಂಗಾಲು ಉರುಲಿನ ಬಲೆಗೆ ಸಿಲುಕಿದ್ದು, ತಪ್ಪಿಸಿಕೊಳ್ಳುವ ಯತ್ನದಲ್ಲಿ ಹಿಂಗಾಲು ಗಾಯವಾಗಿದೆ,ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದಿದ್ದು ಚಿರತೆಗೆ ಅರವಳಿಕೆ ಮದ್ದು ಕೊಟ್ಟು ಚಿರತೆಯನ್ನ ಸೆರೆ ಹಿಡಿಯುವ ಸಿದ್ದತೆ ನಡೆಸಿದ್ದಾರೆ.