ದೊಡ್ಡಬಳ್ಳಾಪುರ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಭೂಮಿ ಪೂಜೆ ನೆರವೇರಿದ ಹಿನ್ನೆಲೆಯಲ್ಲಿ,ಹಿಂದು ಜಾಗರಣ ವೇದಿಕೆವತಿಯಿಂದ ತಾಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಂಭ್ರಮಾಚರಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಹಿನ್ನೆಲೆ ಇಡೀ ಕ್ಷೇತ್ರದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದ್ದು,ಮಹಿಳೆಯರು ಮನೆ ಆವರಣಗಳಲ್ಲಿ ವಿಶೇಷ ರಂಗೋಲಿ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.
ಇದೇ ವೇಳೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು 101 ಸಲ ರಾಮನಾಮ ಜಪಿಸಿದರು.
ಕಾರ್ಯಕ್ರಮದಲ್ಲಿ ಘಾಟಿ ಗೋಶಾಲಾ ಮುಖ್ಯಸ್ಥಾರಾದ ಡಾ.ಜೀವನ್ ಕುಮಾರ್, ರಾಮಣ್ಣ, ನ್ಯಾಯವಾದಿ ರವಿ ಮಾವಿನ ಕುಂಟೆ, ಘಾಟಿ ಚಿನ್ನಿ, ಹಿಂದು ಜಾಗರಣ ವೇದಿಕೆ ಹೋಬಳಿ ಪ್ರಾಧಾನ ಕಾರ್ಯದರ್ಶಿ ಸಂತೋಷ್ ನಾಯ್ಕ್, ಕಾರ್ಯದರ್ಶಿಗಳಾದ ಶಶಿಕುಮಾರ್ ಯಾಧವ್, ನ್ಯಾಯವಾದಿ ಚಂದ್ರು,ಕಾರ್ಯಕರ್ತ ಕಿರಣ್ ಮತ್ತಿತರಿದ್ದರು.