ದೊಡ್ಡಬಳ್ಳಾಪುರ: ಕಳೆದ ಜೂನ್ ನಲ್ಲಿ ನಡೆದ 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.88.57 ರಷ್ಟು ಫಲಿತಾಂಶ ಪಡೆಯುವ ಮೂಲಕ ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3ನೇ ಸ್ಥಾನ ಗಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಕಾರಿ ಬೈಯಪ್ಪ ರೆಡ್ಡಿ ತಿಳಿಸಿದ್ದಾರೆ.
ಅವರು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿ,ಈ ಬಾರಿ ತಾಲೂಕಿನ ಒಟ್ಟು 55 ಪ್ರೌಢಶಾಲೆಗಳಿಂದ 1714 ಬಾಲಕರು ಹಾಗೂ 1629 ಬಾಲಕಿಯರು ಸೇರಿ 3343 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 1491 ಬಾಲಕರು, 1470 ಬಾಲಕಿಯರು ಸೇರಿ ಒಟ್ಟು 2961 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಳೆದ ಸಾಲಿನಲ್ಲಿ. ಶೇ.79.7 ರಷ್ಟು ಲಿತಾಂಶ ಗಳಿಸಿತ್ತು.ಬಾಲಕರು ಶೇ. 86.98ರಷ್ಟು ಮತ್ತು ಬಾಲಕಿಯರು ಶೇ. 90.23 ಉತ್ತೀರ್ಣರಾಗಿರುವುದರ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಸರ್ಕಾರಿ ಶಾಲೆಗಳು ಶೇ. 84.41 (ಎ+ಶ್ರೇಣಿ 40,ಎ -146) ಅನುದಾನಿತ ಶಾಲೆಗಳು ಶೇ. 84.60 (ಎ+ಶ್ರೇಣಿ 17,ಎ -79) ಮತ್ತು ಅನುದಾನ ರಹಿತ ಶಾಲೆಗಳು ಶೇ. 94.30 (ಎ+ಶ್ರೇಣಿ 242,ಎ -284) ಸೇರಿ ತಾಲೂಕಿನಲ್ಲಿ ಒಟ್ಟಾರೆ ಎ+ಶ್ರೇಣಿ 299,ಎ ಶ್ರೇಣಿ 509 ರಷ್ಟು ಫಲಿತಾಂಶ ಪಡೆದಿದೆ.
ನಗರದ ಕಾರ್ಮಲ್ ಜ್ಯೋತಿ ಪ್ರೌಢಶಾಲೆಯ ಅಜಯ್.ಎಸ್ 622 ಅಂಕಗಳನ್ನು ಗಳಿಸಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾನೆ.
ಉಳಿದಂತೆ ನಳಂದ ಪ್ರೌಢ ಶಾಲೆಯ ಹರಿಣಿ.ಎನ್(619),ಕಾರ್ಮಲ್ ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿನಿ ‘ಭಾವನ ಬಿ. ಚೌಧರಿ(618) ಮನು ಟಿ.ಪಿ(614) ನಳಂದ ಶಾಲೆಯ ವಿನಯ್ ಎಸ್ (615) ಸ್ವಾಮಿ ವಿವೇಕಾನಂದ ಇಂಗ್ಲೀಷ್ ಪ್ರೌಢಶಾಲೆಯ ಸೃಜನ್ ಗೌಡ(613), ಎಂ.ಎ.ಬಿ.ಎಲ್ ಪ್ರೌಢಶಾಲೆ ಮಾನಸ.ಇ (613), ಸರಸ್ವತಿ ಶಾಲೆಯ ಮೋಹನ್ ಹೆಚ್(611), ದೊಡ್ಡಬೆಳವಂಗಲದ ಕೆ.ಪಿ.ಎಸ್ ಶಾಲೆಯ ಚೈತನ್ಯ.ಎನ್(610) ಕೊಂಗಾಡಿಯಪ್ಪ ಪ್ರೌಢಶಾಲೆಯ ನರೇಂದ್ರಬಾಬು ಸಿ(610)ದೊಡ್ಡಬೆಳವಂಗಲದ ಜ್ಞಾನವಾಹಿನಿ ಇಂಗ್ಲೀಷ್ ಪ್ರೌಢಶಾಲೆ ಅನುಷಾ ಎಸ್(609) ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗೋವಿಂದಕುಮಾರ್ (608) ದೊಡ್ಡಬೆಳವಂಗಲದ ಜ್ಞಾನವಾಹಿನಿ ಇಂಗ್ಲೀಷ್ ಪ್ರೌಢ ಶಾಲೆಯ ವಾಸುದೇವ ಮೂರ್ತಿ.ಜಿ (608)
ಕನ್ನಡ ಮಾಧ್ಯಮದಲ್ಲಿ ತಾಲೂಕಿನ ಅರಳುಮಲ್ಲಿಗೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಖಿತ ವೈ. ಎಸ್. 605 ಅಂಕ ಪಡೆದು ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯಾಗಿದ್ದಾಳೆ.
ಉಳಿದಂತೆ ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಪ್ರೌಢಶಾಲೆ, ಹೊಸಹಳ್ಳಿಯ ತೇಜಸ್ವಿನಿ (585) ಸರ್ಕಾರಿ ಪ್ರೌಢಶಾಲೆ, ಸಕ್ಕರೆ ಗೊಲ್ಲಹಳ್ಳಿ ಅನಿತ ಕೆ. ಎನ್. (578 ) ಸರ್ಕಾರಿ ಪ್ರೌಢಶಾಲೆ, ಚೆನ್ನವೀರನ ಹಳ್ಳಿ ಚಿನ್ಮಯಿ (578) ಸರ್ಕಾರಿ ಪ್ರೌಢಶಾಲೆ,ಅರಳು ಮಲ್ಲಿಗೆ ಲಲಿತ ಬಿ.ಎಸ್.(578) ಮಾರುತಿ ಪ್ರೌಢಶಾಲೆ,ರಾಜಘಟ್ಟದ ಗಾನಶ್ರೀ (576) ಕೊಂಗಾಡಿಯಪ್ಪ ಪ್ರೌಢಶಾಲೆಯ ದಿವ್ಯ ಕೆ. ಪಿ. (574) ಸರ್ಕಾರಿ ಪ್ರೌಢಶಾಲೆ ಚೆನ್ನವೀರನಹಳ್ಳಿ ಚಿನ್ಮಯಿ (573), ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆಯ ಮೊನಿಕಾ ಜಿ.ಎಂ (573) ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ಶೇ.100 ಲಿತಾಂಶ ಪಡೆದ ಶಾಲೆಗಳು:
ತಾಲೂಕಿನ 55 ಪ್ರೌಢಶಾಲೆಗಳ ಪೈಕಿ 16 ಪ್ರೌಢಶಾಲೆಗಳು ಶೇ.100 ಫಲಿತಾಂಶ ಗಳಿಸಿವೆ.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಅರಳುಮಲ್ಲಿಗೆ ಸರ್ಕಾರಿ ಪ್ರೌಡಶಾಲೆ, ಕಾಡತಿಪ್ಪೂರು ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ.100 ಫಲಿತಾಂಶ ಗಳಿಸಿವೆ.
ಅನುದಾನ ರಹಿತ ಶಾಲೆಗಳಲ್ಲಿ ಕೇಂಬ್ರಿಡ್ ಪ್ರೌಢಶಾಲೆ, ಶ್ರೀ ದೇವರಾಜ ಅರಸು ವಸತಿ ಶಾಲೆ, ನಿಸರ್ಗ ಪಬ್ಲಿಕ್ ಸ್ಕೂಲ್, ಬಾಶೆಟ್ಟಿಹಳ್ಳಿಯ ನಿಕಿಲಾ ವಿದ್ಯಾನಿಕೇತನ, ದೊಡ್ಡಬೆಳವಂಗಲದ ಜ್ಞಾನವಾಹಿನಿ ಪ್ರೌಢಶಾಲೆ, ಕಂಟನಕುಂಟೆಯ ಲಿಟಲ್ ಮಾಸ್ಟರ್ ಇಂಗ್ಲೀಷ್ ಹೈಸ್ಕೂಲ್, ಕಾರ್ಮಲ್ ಜ್ಯೋತಿ ಪ್ರೌಢಶಾಲೆ, ಶ್ರಿರಾಮ ಪ್ರೌಢಶಾಲೆ, ಲಾವಣ್ಯ ಪ್ರೌಢಶಾಲೆ, ಶ್ರೀ ಮಾತಾ ಇಂಟರ್ ನ್ಯಾಷನಲ್ ಶಾಲೆ, ಎಸ್ ಎಲ್ ಆರ್ ಎಸ್ ಪ್ರೌಢಶಾಲೆ, ಎಸ್ ಜೆ ಆರ್ ಸಿ ವಿದ್ಯಾನಿಕೇತನ, ನವೋದಯ ವಿದ್ಯಾನಿಕೇತನ ಶಾಲೆಗಳಾಗಿವೆ.