ದೊಡ್ಡಬಳ್ಳಾಪುರ: ತಾಲ್ಲೂಕಿನ ಬಚ್ಚಹಳ್ಳಿಯ ಮೊರಾರ್ಜಿ ದೇಸಾಯಿ ಶಾಲೆಯ 6ನೇ ತರಗತಿ ಮತ್ತು ಪ್ರಥಮ ಪಿಯುಸಿ, ಮಾಡೇಶ್ವರದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮಧುರೆ ಹೋಬಳಿಯ ಇಸ್ತೂರಿನ ಅಂಬೇಡ್ಕರ್ ವಸತಿ ಶಾಲೆಯ 2020-21ನೇ ಸಾಲಿನ 6ನೇ ತರಗತಿ ಪ್ರವೇಶ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳೆಂದರೆ 5ನೇ ತರಗತಿ ಉತ್ತೀರ್ಣದ ಪ್ರಗತಿ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರಗಳು, ಎಸ್ಎಟಿಎಸ್ ಸಂಖ್ಯೆ, ಆಧಾರ್ ಕಾರ್ಡ್. ವಸತಿ ಶಾಲೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳೆಂದರೆ 6ನೇ ತರಗತಿಯಿಂದ 10ನೇ ಮತ್ತು ಪಿಯುಸಿ ತರಗತಿಯವರೆಗೆ ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ, ಉಚಿತ ಪಠ್ಯ ಪುಸ್ತಕ, ಇತರೆ ಲೇಖನ ಸಾಮಗ್ರಿ,ಸಮವಸ್ತ್ರ,ಶೂ,ಸಾಕ್ಸ್,ಪ್ರತಿ ತಿಂಗಳು ದಿನ ಬಳಕೆ ಕಿಟ್ ಹಾಗೂ ಸುಸಜ್ಜಿತವಾದ ಮೂಲಭೂತ ಸೌಲಭ್ಯಗಳು. ಹೆಚ್ಚಿನ ಮಾಹಿತಿಗಾಗಿ 7259613001, 9845308319, 9980974720.