ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕರೊನಾ ಸೋಂಕಿಗೆ ಒಳಗಾಗಿ ಚೆನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಮತ್ತೊಂದೆಡೆ ಅವರು ಗುಣಮುಖರಾಗಿ ಬರಲೆಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರೆ,ಅವರ ಪುತ್ರ ಚರಣ್ ಅವರ ನಡುವಳಿಕೆ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ.
ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಪಿಬಿ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿತು. ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಇದು ಅವರ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿದೆ.
ಸತತ 19 ದಿನಗಳಿಂದ ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್. ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯದ ವರದಿ ಕುರಿತು ಭಾನುವಾರ ರಾತ್ರಿ ಶುಭಸುದ್ದಿ (ಶುಭ ಸುದ್ದಿ ಮಾತ್ರವೇ) ಪ್ರಸಾರ ಮಾಧ್ಯಮಗಳಿಗೆ ದೊರೆತಿದ್ದು ಅಭಿಮಾನಿಗಳು ನಿಟ್ಟಿಸಿರು ಬಿಡಲು ಕಾರಣವಾಗಿತ್ತು.ಈ ಬೆನ್ನಲ್ಲೆ ಸೋಮವಾರ ಬೆಳಗ್ಗೆ ಎಸ್.ಪಿ.ಬಿ.ಪುತ್ರರದ್ದೆಂಬ ಸಂದೇಶ ಮಾಧ್ಯಮಗಳಿಗೆ ಸಿಕ್ಕು ಎಸ್.ಪಿ.ಬಾಲಸುಬ್ರಹ್ಮಣ್ಯಂ ಗುಣಮುಖರಾಗುತ್ತಿದ್ದಾರೆಂಬ ಶುಭ ಸುದ್ದಿ ಅಲ್ಲವೆ ಎಂಬ ಸಂಭ್ರಮದಲ್ಲಿ ಪರಾಮರ್ಷಿಸದೆ ಪ್ರಕಟಿಸಿದವು..ಬಂತೂ ನೋಡಿ ಬರಸಿಡಿಲು..
ಸತತ 19 ದಿನಗಳಿಂದ ಎಸ್ ಪಿ ಬಿ ಆರೋಗ್ಯದ ಕುರಿತು ಅಭಿಮಾನಿಗಳಿಗೆ ಶುಭಸುದ್ದಿ ನೀಡಲು ಕಾಯುತ್ತಿದ್ದ ಮಾಧ್ಯಮಗಳ ವರದಿ ಸುಳ್ಳು, ಸುಳ್ಳು ಸುದ್ದಿ ಹರಡಬೇಡಿ ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಪುತ್ರ ಎಸ್.ಪಿ.ಚರಣ್ ವಿಡಿಯೋ ಮೂಲಕ ಸಂದೇಶ ಕಳಿಸಿ ಇಡೀ ದಕ್ಷಿಣ ಭಾರತದ ಎಸ್.ಪಿ.ಬಿ.ಅಭಿಮಾನಿಗಳ ಆಶಾ ಗೋಪುರವನ್ನೆ ಕುಸಿಯುವಂತೆ ಮಾಡಿದರು.
ಎಸ್.ಪಿ.ಬಿ ಎಂದರೆ ಕನ್ನಡಿಗರಿಕೆ ಇಷ್ಟು ಪ್ರೀತಿ
ಎಸ್.ಪಿ.ಬಿ.ಕರೊನಾ ಸೋಂಕಿಗೆ ಒಳಗಾದಾಗಿನಿಂದ.ಅವರು ಮೂಲತಃ ಆಂದ್ರ ಪ್ರದೇಶದವರಾದರು,ವಾಸ ಚೆನೈನಲ್ಲಿದ್ದರೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ,ಅಭಿಮಾನ.ಇದಕ್ಕೆ ಮಾದ್ಯಮಗಳು ಹೊರತಾಗಿಲ್ಲ.ಆ ಕಾರಣವೇ ಆಂದ್ರ,ತಮಿಳುನಾಡಿನ ಮಾದ್ಯಮಗಳು ಹೆಚ್ಚಾಗಿ ತಲೆ ಕೆಡಿಸಿಕೊಳ್ಳದಿದ್ದರು ಕರ್ನಾಟಕದ ಮಾದ್ಯಮಗಳು ಎಸ್.ಪಿ.ಬಿ.ಆರೋಗ್ಯದ ಮಾಹಿತಿ ಕರುನಾಡಿನ ಜನತೆಗೆ ನೀಡುವಲ್ಲಿ ಹೆಚ್ಚಿನ ಪಾತ್ರವಹಿಸಿವೆ.
Who r you ಮಿ.ಚರಣ್..?
ಇಲ್ಲಿ ಅಭಿಮಾನಿಗಳಿಗೆ ಕಾಡುತ್ತಿರುವ ಮುಖ್ಯ ಪ್ರಶ್ನೆ ನನ್ನ ತಂದೆಗೆ ಕರೊನಾ ಇದೆ,ಕರೊನಾ ನೆಗೆಟಿವ್ ಎಂಬುದು ಸುಳ್ಳು ಸುದ್ದಿ ಎಂದ ಚರಣ್ ಅವರಿಗೆ ಈ ಮಾತಾಡಬೇಕು ಎಂಬುದು ಹೇಗೆ ಸಾಧ್ಯ ಎಂಬುದಾಗಿದೆ. ಇಡೀ ಮಾದ್ಯಮಗಳು ಒಳ್ಳೆ ಮಾತಾಡುವಾಗ ಇಲ್ಲ ಅದ್ ಸುಳ್ಳು ಎಂದ್ರಲ್ಲ ಏನಿದರ ಉದ್ದೇಶ,ಆಗಾದರೆ ಸತ್ಯ ನೀವ್ಯಾಕ್ ಕೊಡ್ಲಿಲ್ಲ..ಮಿ.ಚರಣ್..?
ಇರೋ ಬರೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಅಕೌಂಟ್ ಇಟ್ಕೊಂಡ್ ಎಸ್.ಪಿ.ಬಿ.ಹೆಲ್ತ್ ಬುಲೆಟಿನ್ ಬೇಕಾ ಅ ಅಕೌಂಟಲ್ ನೋಡಿ,ಈ ಅಕೌಂಟಲ್ ನೋಡಿ ಎಂದು ಅಭಿಮಾನಿಗಳು, ಮಾದ್ಯಮಗಳಿಗೆ ಆಟವಾಡಿಸ್ತಾ ಇದ್ದೀರಿ ಅದ್ ಸುಳ್ಳೆ…?
ಆಗಸ್ಟ್ 22ರ ಸಂಜೆಯ ನಂತರ ನಿಮ್ಮದಾಗಲಿ, ಎಂಜಿಎಂ ಹೆಲ್ತ್ ಕೇರ್ ಬುಲೆಟಿನ್ ಆಗಲಿ ಇಲ್ಲ….ಏಕೆ..? ಮತ್ತೆ ನಮ್ ಅಪ್ಪ ಗುಣಮುಖರಾಗಿಲ್ಲ ಸುಳ್ ಸುದ್ದಿ ನಂಬ್ ಬೇಡಿ.ನಾನೆ ಡಾಕ್ಟರ್ ಕೇಳಿ ವಿಡಿಯೋ ಕಳಿಸ್ತಿನಿ ಅನ್ನೋ ನೀವ್ ಎರಡು ದಿನ ಮಾಹಿತಿ ಯಾಕ್ ನೀಡಲಿಲ್ಲ.ತಂದೆ ಆಸ್ಪತ್ರೆಯಲ್ಲಿದ್ದೀರಿ,ನಿಮಗಿಂತ ಹೆಚ್ಚಿನ ಅಭಿಮಾನಿಗಳಿಗೆ ಅವರ ಆರೋಗ್ಯದ ಕಾಳಜಿ ಹೆಚ್ಚಾಗಿದೆ, ಮೊದಲು ಸಮರ್ಪಕ ಮಾಹಿತಿ ನೀಡಿ ಸಾರ್.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಮೇಲಿನ ಅಭಿಮಾನದಿಂದ ಮಾದ್ಯಮಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಕಾಳಜಿ ತೋರುತ್ತಿದ್ದಾರೆ..ಇಷ್ಟಕ್ಕು ಎಸ್.ಪಿ.ಬಿ ನಮ್ಮವರೂ ನೀವ್ಯಾರು….?